ಬೆಂಗಳೂರು : ಬೆಂಗಳೂರಿನಲ್ಲಿ 1 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದು, ಕೇರಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಕೇರಳದ ಮಾದಕ ವಸ್ತು ನಿಗ್ರಹದಿಂದ ಕಾರ್ಯಾಚರಣೆ ನಡೆದಿದ್ದು, ಅಸ್ಸಾಂ ಮೂಲದ ಡ್ರಗ್ ಪೆಡ್ಲರ್ ಧೀರೇಶ ಕುಟುಂ (27) ಎನ್ನುವ ಆರೋಪಿಯನ್ನು ಬಂಧಿಸಲಾಗಿದೆ.
ಅಂತರಾಜ್ಯ ಗಾಂಜಾ ಪೆಡ್ಲರನ್ನು ಕೇರಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮಲ್ಲಸಂದ್ರದಲ್ಲಿ ಆರೋಪಿಯಿಂದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಸೆರೆಲ್ಯಾಕ್ ಪ್ಯಾಕೆಟ್ ಗಳಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ಕೇರಳ ಪೊಲೀಸರು ದಾಳಿ ಮಾಡಿದ್ದಾರೆ. ರಮೇಶ್ ರೆಡ್ಡಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಗಾಂಜಾ ಜಪ್ತಿ ಮಾಡಿದ್ದಾರೆ. ಈ ವೇಳೆ 15 ಕ್ಕೂ ಹೆಚ್ಚು ಖಾಲಿಯಾದ ಸರಳ ಪಾಕೆಟ್ಗಳು ಪತ್ತೆಯಾಗಿವೆ.
ಆನ್ಲೈನ್ ಫುಡ್ ಡೆಲಿವರಿ ಬಾಯ್ ರೀತಿ ಹಿತ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಕೇರಳದ ಮಲಪುರಂನಲ್ಲಿ ಧೀರೇಶ್ ಸಹಚರರು ಸಿಕ್ಕಿ ಬಿದ್ದಿದ್ದರು. ವಾರದ ಹಿಂದೆ ಒಂದು ಕೆಜಿ ಎಂಡಿಎಂಎ ಸಹಿತ 8 ಆರೋಪಿಗಳನ್ನು ಸೆರೆ ಹಿಡಿಯಲಾಗಿತ್ತು. ವಿಚಾರಣೆಯ ವೇಳೆ ಕಿಂಗ್ ಪಿನ್ ಧೀರೇಶ್, ಕುಟುಂ ಬಗ್ಗೆ ಆರೋಪಿಗಳು ಮಾಹಿತಿ ನೀಡಿದ್ದಾರೆ. ಆರೋಪಿ ದೀರೇಶ್ ತಂಗಿಯ ಪತಿ ನೈಜೀರಿಯಾ ಮೂಲದವನು ಎಂದು ತಿಳಿದು ಬಂದಿದೆ. ಆತನ ಮೂಲಕ ಅಸ್ಸಾಂಗೆ ಧೀರೇಶ್ ಎಂಡಿಎಂಎ ರವಾನಿಸುತ್ತಿದ್ದ. ಅಸ್ಸಾಂನಲ್ಲಿರುವ ತಂಗಿಯ ಮೂಲಕ ಕೇರಳ, ಕರ್ನಾಟಕಕ್ಕೆ ಸಾಗಾಟ ಮಾಡುತ್ತಿದ್ದರು. ಪ್ರಕರಣ ಸಂಬಂಧ ಕೇರಳ ಪೊಲೀಸರಿಂದ 9 ಆರೋಪಿಗಳ ಬಂಧನವಾಗಿದೆ.








