ಬೆಂಗಳೂರು : ಬೆಂಗಳೂರಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ಸೀಜ್ ಮಾಡಿದ್ದಾರೆ. ಪ್ರತಿಷ್ಠಿತ ಅಪಾರ್ಟ್ಮೆಂಟ್ನಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ಬಾಗಲೂರಿನ ಪ್ರೆಸ್ಟೀಜ್ ಫೈಂಡ್ ವೆರಿ ಪಾರ್ಕ್ ನ ಪ್ಲಾಟ್ನಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
10 ಕೋಟಿ ರೂಪಾಯಿ ಮೌಲ್ಯದ LSD ಹೈಡ್ರೋಗಂಜ, ಚರಸ್ ಅನ್ನು ಜಪ್ತಿ ಮಾಡಿಕೊಂಡಿದ್ದು. ಕೇರಳ ಮೋಡದ ಅಶ್ವಿನ್ (27) ಹಾಗೂ ಮೊಬಿನ (25) ಎನ್ನುವ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ ಸಿಸಿಬಿ ನಾರ್ಕ್ಕೋಟಿಕ್ ವಿಭಾಗದಿಂದ ಈ ಒಂದು ಕಾರ್ಯಾಚರಣೆ ನಡೆದಿದೆ. ಪೆಡ್ಲಿಂಗ್ ಅನ್ನೆ ಇಬ್ಬರು ಆರೋಪಿಗಳು ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.
ಮೊದಲ ಬಾರಿಗೆ ಕರ್ನಾಟಕದಲ್ಲಿ 8335 LSD ಸೀಜ್ ಮಾಡಲಾಗಿದೆ. ಒಂದು ಎಲ್ ಎಸ್ ಡಿ ಸ್ಕ್ರಿಪ್ಸ್ ಬೆಲೆ ರೂ.6,000 ಬೆಲೆ ಬಾಳುತ್ತದೆ. ದೇವರ ಚಿತ್ರ ಸೇರಿದಂತೆ ವಿವಿಧ ಚಿತ್ರಕಲಾ ರೂಪದಲ್ಲಿ LSD ಸ್ಕ್ರಿಪ್ಟ್ ಮಾರಾಟ ಮಾಡಲಾಗುತ್ತಿತ್ತು. ಜೊತೆಗೆ ಚಿರಸ್ 534 ಗ್ರಾಂ ಹೈಡ್ರೋ ಗಾಂಜಾ 5 ಕೆಜಿ ವಶಕ್ಕೆ ಪಡೆಯಲಾಗಿದೆ. ಸದ್ಯ ಫ್ಲಾಟ್ ಮಾಲೀಕನ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.








