ಬೆಂಗಳೂರು : ಬೆಂಗಳೂರಲ್ಲಿ ಇಂದು ಡಬಲ್ ಮರ್ಡರ್ ನಡೆದಿದ್ದು, ಅಕ್ರಮ ಸಂಬಂಧ ಪ್ರಶ್ನಿಸಲು ಬಂದಿದ್ದ ಅಕ್ಕ ತಮ್ಮನನ್ನ ಅಪ್ರಾಪ್ತ ಬಾಲಕನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿನ್ಯಾದ ಎಚ್ಎಂಟಿ ಲೇಔಟ್ ನಲ್ಲಿ ಈ ಒಂದು ಕೊಲೆ ನಡೆದಿದೆ. ಚಾಕುವಿನಿಂದ ಇರಿದು ಯಮುನಾ (36) ಮತ್ತು ಆಕೆಯ ತಮ್ಮ ಸುದೀಪ್ (34) ಎನ್ನುವವರನ್ನ ಕೊಲೆ ಮಾಡಲಾಗಿದೆ.
16 ವರ್ಷದ ಅಪ್ರಾಪ್ತ ಬಾಲಕನಿಂದ ಈ ಒಂದು ಕೃತ್ಯ ನಡೆದಿದೆ. ಆರೋಪಿ ತಾಯಿ ಛಾಯಾ ಹಾಗೂ ಯಮುನಾ ಗಂಡನಿಗೆ ಅಕ್ರಮ ಸಂಬಂಧವಿತ್ತು . ಮನೆಗೆ ಬಂದು ಛಾಯಾ ಜೊತೆಗೆ ಅಕ್ಕ ಯಮುನಾ ತಮ್ಮ ಸುದೀಪ್ ಜಗಳ ಆಡುತ್ತಿದ್ದರು. ಈ ವೇಳೆ ಚಾಕುವಿನಿಂದ ಇರಿದು ಛಾಯಾ ಪುತ್ರ ಇಬ್ಬರನ್ನು ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಡಿಸಿಪಿ ನಾಗೇಶ್ ಪಿಣ್ಯ ಪೊಲೀಸರು ಭೇಟಿ ನೀಡಿ ನಡೆಸುತ್ತಿದ್ದಾರೆ.
ಇತ್ತ ಮಾವ ಹಾಗು ತಾಯಿಯ ಕೊಲೆ ಸುದ್ದಿ ಕೇಳಿ ಪುತ್ರಿ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ . ಹೌದು ಯಮುನಾ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಯಮುನಾ ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಯಮುನಾ ಹಾಗೂ ಆಕೆಯ ಸಹೋದರ ಸುದೀಪ್ ನನ್ನು ಅಪ್ರಾಪ್ತ ಬಾಲಕನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ತಾಯಾಗು ಸೋದರ ಮಾವನ ಹತ್ಯೆ ತಿಳಿದು ಯಮುನಾ ಪುತ್ರಿ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.








