ನವದೆಹಲಿ : ಭಾರತಕ್ಕೆ ದಂಡ ವಿಧಿಸುವ ಮಸೂದೆಗೆ ಟ್ರಂಪ್ ಇದೀಗ ಗ್ರೀನ್ ಸಿಗ್ನಲ್ ನೀಡಿದ್ದಾರೆ ಹರ್ಷದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ದಂಡಪಿಸುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಖಚಿತಪಡಿಸಿದೆ. ಭಾರತ, ಚೀನಾ ಹಾಗು ಬ್ರೆಜಿಲ್ ಗೆ ದಂಡ ವಿಧಿಸಲು ಡೊನಾಲ್ಡ್ ಟ್ರಂಪ್ ಇದೀಗ ಸಮ್ಮತಿ ಸೂಚಿಸಿದ್ದಾರೆ.
ರಷ್ಯಾದಿಂದ ರಿಯಾಯಿತಿ ದರದಲ್ಲಿ ಮೂರು ದೇಶಗಳು ತೈಲ ಖರೀದಿಸುತ್ತಿವೆ ಭಾರತದ ಜೊತೆಗೆ ಚೀನಾ ಮತ್ತು ಬ್ರೆಜಿಲ್ ದೇಶಗಳಿಗೆ ದಂಡ ವಿಧಿಸುವ ಮಸೂದೆಗೆ ಡೊನಾಲ್ಡ್ ಟ್ರಂಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಗ್ಗೆ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಖಚಿತಪಡಿಸಿದೆ. ಡೊನಾಲ್ಡ್ ಟ್ರಂಪ್ ನಡೆಸಿದ ಸಭೆಯ ನಂತರ ಈ ಒಂದು ನಿರ್ಧಾರ ಹೊರ ಬಿದ್ದಿದೆ. ಪೆಟ್ರೋಲಿಯಂ ಉತ್ಪನ್ನ ಮತ್ತು ಯುರೇನಿಯಂ ಖರೀದಿಸುವ ರಾಷ್ಟ್ರಗಳಿಗೆ ದಂಡ ವಿಧಿಸಲಾಗಿದೆ. ‘ತಿಳಿದು ಖರೀದಿಸುವ’ ರಾಷ್ಟ್ರಗಳ ಮೇಲೆ 500 ರಷ್ಟು ಸುಂಕ ಹೇರಲಾಗುತ್ತದೆ.
ಶೇ.500 ರಷ್ಟು ಸುಂಕ ವಿಧಿಸಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಪುಟಿನ್ ಯುದ್ಧ ತಂತ್ರಕ್ಕೆ ಸಹಾಯ ಮಾಡುತ್ತಿರುವ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ. ಆರ್ಥಿಕವಾಗಿ ಸಹಾಯ ಮಾಡುತ್ತಿರುವ ದೇಶಗಳನ್ನು ಹದ್ದು ಬಸ್ಸಿನಲ್ಲಿ ಇಡಲು ಕ್ರಮ ಕೈಗೊಂಡಿದ್ದಾರೆ. ಹದ್ದು ಬಸ್ತಿನಲ್ಲಿ ಇಡಲು ಕಠಿಣ ಕ್ರಮ ಅನಿವಾರ್ಯ ಎಂದು ಟ್ರಂಪ್ ಆಡಳಿತ ತಿಳಿಸಿದೆ. ‘ಸ್ಯಾಂಕ್ಷನಿಂಗ್ ರಷ್ಯಾ ಆಕ್ಟ್-2025’ ಮಸೂದೆಗೆ ಟಂಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮುಂದಿನ ವಾರವೇ ಅಮೆರಿಕದ ಕಾಂಗ್ರೆಸ್ ನಲ್ಲಿ ಮಸೂದೆ ಮಂಡನೆ ಆಗಲಿದೆ.








