ಬಳ್ಳಾರಿ : ಬಳ್ಳಾರಿಯಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ಆಗಿ ಫೈರಿಂಗ್ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದರು ಇದೀಗ ರಾಜಶೇಖರ ಪೋಸ್ಟ್ ಮಾರ್ಟಂ ಹಾಗೂ ವೈದ್ಯರ ನಡೆ ತೀವ್ರ ಅನುಮಾನ ಗುಡಿಸಿದ್ದು ರಾಜಕೀಯ ಒತ್ತಡಕ್ಕೆ ಮಾಡಿದ ವೈದ್ಯರು ಈ ಒಂದು ರಾಜಶೇಖರ್ ಸಾವಿನ ಸಾಕ್ಷಿ ನಾಶ ಮಾಡಲು ಬಂದಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಹೌದು ಫೈರಿಂಗ್ ಪ್ರಕರಣವನ್ನು ಮುಚ್ಚಿಹಾಕಲು ಷಡ್ಯಂತರ ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಭರತ್ ರೆಡ್ಡಿ ಗನ್ ಮ್ಯಾನ್ ಹಾರಿಸಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು, ಗುಂಡು ಹಾರಿದ್ದನ್ನೇ ಮುಚ್ಚಿ ಹಾಕಲು ಇದೀಗ ರಾಜಕೀಯ ಒತ್ತಡ ಹೇರಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ರಾಜಶೇಖರ್ ದೇಹವನ್ನು ಡಬಲ್ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಎರಡೆರಡು ಬಾರಿ ರಾಜಶೇಖರ ಪೋಸ್ಟ್ ಮಾರ್ಟಂ ನಡೆದಿತ್ತು ರಾಜಶೇಖರ್ ದೇಹದಲ್ಲಿಯೇ ವೈದ್ಯರು ಬುಲೆಟ್ ಬಿಟ್ಟಿದ್ದರು. ರಾಜಕೀಯ ಒತ್ತಡಕ್ಕೆ ಸಿಲುಕಿ ವೈದ್ಯರು ಗುಂಡು ಹೊರಗಡೆ ತೆಗೆದಿರಲಿಲ್ಲ.
ಭರತ ರೆಡ್ಡಿ ತಂದೆ ನಾರಾಯಣ ರೆಡ್ಡಿ ಇಂದ ರಾಜಕೀಯ ಒತ್ತಡ ಆರೋಪ ಕೇಳಿ ಬಂದಿದೆ. ಮೊದಲು ಶವ ಪರೀಕ್ಷೆಯಲ್ಲಿ ಬುಲೆಟ್ ವೈದ್ಯರು ಹೊರಗಡೆ ತೆಗೆಯಲಿಲ್ಲ. ರಾಜಶೇಖರ್ ದೇಹದಲ್ಲಿ ವೈದ್ಯರು ಬುಲೆಟ್ ಬಿಟ್ಟಿದ್ದರು . ಹಾಗಾಗಿ ಡಬಲ್ ಪೋಸ್ಟ್ ಮಾರ್ಟಂ ಮಾಡಲಾಯಿತು. ದೇಹದಲ್ಲಿ ಬುಲೆಟ್ ಹಾಗೆ ಇದೆ ತೆಗೆದುಕೊಡಿ ಅಂತ ಪೊಲೀಸರು ಹೇಳಿದರು. ಬುಲೆಟ್ ತೆಗೆದುಕೊಟ್ಟರೆ ತನಿಖೆಗೆ ಅನುಕೂಲ ಅಂತ ತಿಳಿಸಿದರು. ಹಾಗಾಗಿ ಎರಡು ಬಾರಿ ಪೋಸ್ಟ್ ಮಾರ್ಟಂ ಮಾಡಿ ಬುಲೆಟ್ ಅನ್ನು ವೈದ್ಯರು ಹೊರಗಡೆ ತೆಗೆದಿದ್ದಾರೆ.
ಬುಲೆಟ್ ಹೊರಗಡೆ ತೆಗೆಯದೆ ಅಂತ್ಯಕ್ರಿಯೆಗೆ ಮಾಡಲು ಪ್ಲಾನ್ ಮಾಡಿಕೊಂಡಿತ್ತು. ಆದರೆ Xರೆನಲ್ಲಿ ಇದ್ದ ಬುಲೆಟ್ ಶವ ಪರೀಕ್ಷೆಯಲ್ಲಿ ಮಾಯವಾಗಿತ್ತು ದೇಹದಲ್ಲಿ ಬುಲೆಟ್ ಇದೆ ಎಂದು ಪೊಲೀಸರು ಮಾಡಿದ್ದಾರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಪೊಲೀಸರು ಸೂಚನೆ ನೀಡಿದರು ದೇಹದಲ್ಲಿ ಬುಲೆಟ್ ಹಾಗೆ ಇದೆ ತೆಗೆದುಕೊಡಿ ಎಂದು ಸೂಚನೆ ನೀಡಿದ್ದರು. ರಾಜಶೇಖರ ಸಾವಿನ ಸಾಕ್ಷಿ ನಾಶಕ್ಕೆ ಯತ್ನ ನಡೆದಿತ್ತು. ವೈದ್ಯರ ನಡೆಯಿಂದ ಭಾರಿ ಅನುಮಾನ ಹುಟ್ಟಿಕೊಂಡಿದೆ.








