ಬೆಂಗಳೂರು : ಸಾಮಾನ್ಯವಾಗಿ ಕುಡುಕರಿಗೆ ವೈದ್ಯರು ಕುಡಿಯಬೇಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳುವುದು ಸಹಜ ಆದರೆ ಇದೀಗ ಬೆಂಗಳೂರಿನಲ್ಲಿ ಇದರ ತದ್ವಿರುದ್ಧವಾಗಿ ಆಸ್ಪತ್ರೆಗೆ ಬಂದಿದ್ದ ಯುವತಿಗೆ ವೈದ್ಯ ಹಾಗೂ ನರ್ಸ್ ಕುಡಿದ ಮತ್ತಿನಲ್ಲೇ ನಾಲ್ಕರಿಂದ ಐದು ಬಾರಿ ಇಂಜೆಕ್ಷನ್ ನೀಡಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಬಳಿ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು ಕುಮಾರಸ್ವಾಮಿ ಲೇಔಟ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಈ ಒಂದು ಅವಾಂತರ ನಡೆದಿದ್ದು, ಮತ್ತಿನಲ್ಲೇ ಡಾಕ್ಟರ್ ಮತ್ತು ನರ್ಸ್ ಯುವತಿ ಜೀವಕ್ಕೆ ಕುತ್ತು ತರುತ್ತಿದ್ದರು. ನವೆಂಬರ್ 3 ರಂದು ಜ್ವರ ನಿತ್ರಾಣದಿಂದ ಆಸ್ಪತ್ರೆಗೆ ಯುವತಿ ಭೇಟಿ ನೀಡಿದ್ದಾಳೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ವೈದ್ಯ ಪ್ರದೀಪ್ ಮತ್ತು ನರ್ಸ್ ಮಹೇಂದ್ರ ಯುವತಿಯ ಕೈಹಿಡಿದು ಒಂದು ಇಂಜೆಕ್ಷನ್ ನೀಡಿದ್ದಾರೆ. ಬಳಿಕ ವೈದ್ಯ ಪ್ರದೀಪ್ ಕರೆದು ಯುವತಿಗೆ ನತ್ತೊಂದು ಇಂಜೆಕ್ಷನ್ ನೀಡುತ್ತಾನೆ.
ಅಲ್ಲದೇ ಹಾಗೆ 4 ರಿಂದ 5 ಬಾರಿ ಇಂಜೆಕ್ಷನ್ ನೀಡಿದ್ದಾರೆ. ಮೈ ಕೈಗೆ ನಾಲ್ಕೈದು ಇಂಜೆಕ್ಷನ್ ಹಾಕಿದ್ದರಿಂದ ಯುವತಿ ಗಾಬರಿಯಾಗಿದ್ದಾಳೆ. ತಕ್ಷಣವೇ ಕುಡಿದು ಬಂದಿದ್ದೀರಾ ಅಂತ ಹೇಳಿದ್ದಕ್ಕೆ ವೈದ್ಯ ಅಲ್ಲಿಂದ ಪರಾರಿಯಾಗಿದ್ದಾನೆ. ಇದೆ ವೇಳೆ ಕುಡಿದು ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪ ಕೂಡ ಕೇಳಿಬಂದಿದೆ. ಮಹೇಂದ್ರನನ್ನು ಯುವತಿಯ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ಯುವತಿ ಇದೀಗ ದೂರು ನೀಡಿದ್ದಾಳೆ.