ಬಳ್ಳಾರಿ : ರಾಜ್ಯದಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದ್ದು, ಬಳ್ಳಾರಿಯಲ್ಲಿ ಮಕ್ಕಳ ವೈದ್ಯ ಡಾ.ಸುನೀಲ್ ಅವರನ್ನು ಅಪಹರಣಕಾರು ಅಪಹರಿಸಿರುವ ಘಟನೆ ನಡೆದಿತ್ತು. ಆದರೆ ನಿನ್ನೆ ಸಂಜೆ ಕಿಡ್ನಾಪರ್ಸ್ ಅವರನ್ನು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮದ ಹೊಲ ವೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಹೌದು ಸುನೀಲ್ ಮೊಬೈಲ್ ನಿಂದಲೇ ಅವರ ಕುಟುಂಬದವರಿಗೆ ದೂರವಾಣಿ ಕರೆ ಮಾಡುತ್ತಿದ್ದ ಅಪಹರಣಕಾರರು, ಮೂರು ಕೋಟಿ ರೂ. ನಗದು ಹಣ, ಮೂರು ಕೋಟಿ ಮೌಲ್ಯದ ಬಂಗಾರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಡಾ. ಸುನೀಲ್ ಮೊಬೈಲ್ ನಿಂದ ಎರಡು ಬಾರಿ ದೂರವಾಣಿ ಕರೆ ಮಾಡಿದ್ದ ಅಪಹರಣಕಾರರಯ ಹಿಂದಿಯಲ್ಲಿ ಮಾತನಾಡಿದ್ದರು. ಆದರೆ, ಬೆಳಗ್ಗೆಯಿಂದ ಊರೂರು ಸುತ್ತಿದ ಅಪಹರಾಕಾರರು, ರಾತ್ರಿ 9 ಗಂಟೆ ಸುಮಾರಿಗೆ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮದ ಹೊಲ ವೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಪ್ರಕರಣ ಹಿನ್ನೆಲೆ?
ಡಾ. ಸುನೀಲ್ ಅವರು ಶನಿವಾರ ನಸುಕಿನಲ್ಲಿ ಸತ್ಯನಾರಾಯಣಪೇಟೆಯಲ್ಲಿ ಇರುವ ಶನೀಶ್ವರ ದೇವಸ್ಥಾನದ ಹತ್ತಿರ ವಾಕಿಂಗ್ ಮಾಡುತ್ತಿದ್ದಾಗ ಟಾಟಾ ಇಂಡಿಕಾ ಕಾರಿನಲ್ಲಿ ಬಂದವರು ಅವರನ್ನು ಥಳಿಸಿ, ಕಾರಿನ ಹಿಂಭಾಗದ ಸೀಟಿಗೆ ದಬ್ಬಿ, ಅವರನ್ನು ಅಪಹರಿಸಿದ್ದರು.
ಅಪಹರಣದ ಅರ್ಧಗಂಟೆಯ ನಂತರ, ಡಾ. ಸುನೀಲ್ ಅವರ ಮೊಬೈಲ್‍ನಿಂದಲೇ ಅವರ ಸಹೋದರ ವೇಣುಗೋಪಾಲ್ ಗುಪ್ತ ಅವರಿಗೆ ಕರೆ ಮಾಡಿ, ಡಾ. ಸುನೀಲ್ ಅವರನ್ನು ಅಪಹರಣ ಮಾಡಿದ್ದೇವೆ. ಹಣ ನೀಡಿ, ಬಿಡಿಸಿಕೊಂಡು ಹೋಗಿ ಎಂದು ಮಾಹಿತಿ ನೀಡಿ, ಕೋಟ್ಯಾಂತರ ರೂಪಾಯಿ ಬೇಡಿಕೆ ಇರಿಸಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭರಾಣಿ ಅವರು, ಆರೋಪಿಗಳನ್ನು ಪತ್ತೆ ಮಾಡಿ, ಅಪಹೃತರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಮೊದಲ ಆದ್ಯತೆ ನೀಡಿ, ಮೂರು ತಂಡಗಳನ್ನು ರಚಿಸಿ, ತನಿಖೆ ಪ್ರಾರಂಭಿಸಿದ್ದರು. ಅಪಹರಣ ಆದ ಸ್ಥಳದಲ್ಲಿಯ ಸಿಸಿಟಿವಿ ಫೂಟೋಜ್‍ಗಳನ್ನು ವಶಕ್ಕೆ ಪಡೆದು, ತನಿಖೆ ಪ್ರಾರಂಭಿಸಿದ್ದರು.
ಆದರೆ, ಶನಿವಾರ ಸಂಜೆ ಮಬ್ಬುಗತ್ತಲಾಗುತ್ತಿದ್ದಂತೆಯೇ ಅಪಹರಣಕಾರರು ಡಾ. ಸುನೀಲ್ ಅವರನ್ನು ಬಾಲಾಜಿ ಕ್ಯಾಂಪ್ ಅಥವಾ ಬಳ್ಳಾರಿಯ ಹೊರ ವಲಯದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಆದರೆ, ಅಪಹರಣಕಾರರು ಯಾವ ಕಾರಣಕ್ಕಾಗಿ, ಏತಕ್ಕಾಗಿ ಡಾ. ಸುನೀಲ್ ಅವರನ್ನು ಅಪಹರಿಸಿದ್ದರು ಎನ್ನುವ ಮಾಹಿತಿ ಸಿಕ್ಕಿಲ್ಲ.