ಬೆಳಗಾವಿ : ಬೆಳಗಾವಿಯಲ್ಲಿ ಹಣಕಾಸು ವ್ಯವಹಾರ ಹಿನ್ನೆಲೆ ವೈದ್ಯನನ್ನು ಕಿಡ್ನ್ಯಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಈ ಒಂದು ಕೃತ್ಯ ನಡೆದಿದೆ. ಕಟ್ಟಿಗೆ, ಪೈಪ್, ಮತ್ತು ಹಗ್ಗದಿಂದ ಮನಬಂದಂತೆ ದುಷ್ಕರ್ಮಿಗಳು ವೈದ್ಯ ಆನಂದ್ ಉಪಾಧ್ಯಾಯ ಹಲ್ಲೆ ಮಾಡಿದ್ದಾರೆ.
ಜುಲೈ 10ರಂದು ದುಷ್ಕರ್ಮಿಗಳು ಡಾ. ಆನಂದ್ ರನ್ನು ಅಪಹರಿಸಿದ್ದಾರೆ. ಕಾಡಪ್ಪ ತೇಲಿ, ಸಿದ್ದಪ್ಪ ತೇಲಿ, ಸಿದ್ದರಾಯ ತೇಲಿ ಸೇರಿದನೇ ಒಟ್ಟು 25 ಜನರ ಗ್ಯಾಂಗ್ನಿಂದ ವೈದ್ಯನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ. ಮಹೇಶವಾಡಿ ಗ್ರಾಮದ ಡಾಕ್ಟರ್ ಆನಂದ್ ಉಪಾಧ್ಯಾಯ ಹಲ್ಲೆಗೆ ಒಳಗಾಗಿದ್ದು, ವೈದ್ಯನ ಅಪಹರಣದ ಬಗ್ಗೆ ಸಂಬಂಧಿಕರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ.
ಆದರೂ ಕೂಡ ಅಥಣಿ ತಾಣೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಆನಂದ್ಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2018 ರಲ್ಲಿ ತೇಲಿ ಕುಟುಂಬದ ಜೊತೆಗೆ ಸೇರಿ ವೈದ್ಯ ಶಾಲೆ ಆರಂಭಿಸಿದ್ದಾರೆ. ಡಾಕ್ಟರ್ ಆನಂದ್ ಶ್ರೀ ಪದ್ಮಾವತಿ ಇಂಟರ್ನ್ಯಾಷನಲ್ ಸ್ಕೂಲ್, ತೇಲಿ ಕುಟುಂಬಕ್ಕೆ 1.80 ಹಣ ಡಾ ಆನಂದಿ ನೀಡಿದ್ದರು.
ಅನಂತರ ಹಣಕಾಸಿನ ವಿಚಾರದಲ್ಲಿ ಗಲಾಟೆ ಆಗಿ ಆನಂದ್ ಹೊರ ಬಂದಿದ್ದರು. ಸ್ಕೂಲ್ ವಿಚಾರವಾಗಿ ಹೈಕೋರ್ಟ್ ನಲ್ಲಿ ಕೇಸ್ ವಿಚಾರಣೆ ನಡೆಯುತ್ತಿದೆ. ಸದ್ಯ ವೈದ್ಯನ ಮೇಲೆ ಹಲ್ಲೆ ಸಂಬಂಧ ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಿರ್ಲಕ್ಷ ತೋರಿದ ಆರೋಪ ಕೂಡ ಕೇಳಿ ಬಂದಿದೆ ಹಾಗಾಗಿ ಅಥಣಿ ಠಾಣೆ ಪೊಲೀಸರು ವಿರುದ್ಧ ಕ್ರಮ ಕೈಗೊಳ್ಳುವಂತೆ ಆನಂದ್ ಉಪಾಧ್ಯಾಯ ಕುಟುಂಬಸ್ಥರು ಬೆಳಗಾವಿ ಎಸ್‌ಪಿ ಗೆ ಮನವಿ ಮಾಡಿದ್ದಾರೆ.