ಬೆಂಗಳೂರು : ಕೊಲೆ ಕೇಸ್ ನಲ್ಲಿ ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದ್ದು, ಇದೀಗ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಮತ್ತೆ ಜೈಲೇ ಫಿಕ್ಸ್ ಆಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ನಟ ದರ್ಶನ್ ಗಲಿಬಿಲಿ ಆಗಿದ್ದಾರೆ. ಆದರೆ ನಟ ದರ್ಶನ್ ಮೈಸೂರಲ್ಲಿ ಇರದೇ ಬೇರೆ ಕಡೆಗೆ ತೆರಳಿದ್ದರು. ಇದೀಗ ನಟ ದರ್ಶನ್ ಮಡಿಕೇರಿಯ ಸುಂಟಿಕೊಪ್ಪದಲ್ಲಿರುವ ತಮ್ಮ ಸ್ನೇಹಿತನ ಫಾರ್ಮ್ ಹೌಸ್ ನಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಬರುತ್ತಿದ್ದಂತೆ ಇದೀಗ ನಟ ದರ್ಶನ್ ಮಡಿಕೇರಿಯಿಂದ ಮೈಸೂರಿಗೆ ಬರುತ್ತಿದ್ದಾರೆ.