ಚೆನ್ನೈ: ಇತ್ತೀಚೆಗೆ ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ತಮಿಳುನಾಡು ಕಾರಣ ಎಂದು ಮಂಗಳವಾರ ಹೇಳಿದ್ದರು. ಈ ಹೇಳಿಕೆಗೆ ಸಂಬಂಧಪಟ್ಟಂತೆ ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಬುಧವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ದಳ ಯಾರನ್ನೂ ಬಂಧನ ಮಾಡಿಲ್ಲ. ಹೀಗಾಗಿ ಪ್ರಜಾಪತ್ರಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಡಿಎಂಕೆಯ ಆರ್.ಎಸ್ ಭಾರತಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈಬಗ್ಗೆ ಡಿಎಂಕೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇನ್ನು ತಮಿಳಿಗರ ಆಕ್ರೋಶಕ್ಕೆ ಕಾರಣವಾಗಿದೆ ಶೋಭಾ ಕರಂದ್ಲಾಜೆ ಅವರು ನನ್ನ ತಮಿಳು ಸಹೋದರ ಮತ್ತು ಸಹೋದರಿಯರಿಗೆ ನಾನು ಕ್ಷಮೆ ಕೇಳುತ್ತೇನೆ. ಸಮಾಜದಲ್ಲಿ ಬೆಳಕು ಚೆಲುವಂತ ಕುರಿತಂತೆ ಹೇಳಿಕೆ ನೀಡಿದ್ದೇನೆ ಹೊರತು ಯಾವುದೇ ನೋವುಂಟು ಮಾಡುವ ಉದ್ದೇಶ ನನಗಿಲ್ಲ. ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದಿದ್ದು ರಾಮೇಶ್ವರಂ ಕೆಫೆ ಲಿಸ್ಪೋಟಗೊಂಡಿರುವುದಕ್ಕೆ ಮಾತ್ರ ನಾನು ಟೀಕೆ ಮಾಡಿದ್ದೇನೆ ಆದರೆ ನನ್ನ ಮಾತುಗಳಿಂದ ಕೆಲವರಿಗೆ ನೋವು ತಂದಿದ್ದರಿಂದ ನಾನು ಕ್ಷಮೆ ಕೇಳಿದ್ದು ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಟ್ವೀಟ್ ನಲ್ಲಿ ಕ್ಷಮೆಯಾಚಿಸಿದ್ದಾರೆ.
இரு மாநிலங்களுக்கு இடையே கலவரத்தை தூண்டும் வகையிலும், தமிழ்நாட்டு மக்களை இழிவுப்படுத்தியும் பேசிய ஒன்றிய அமைச்சர் ஷோபா மற்றும் பாஜக மீது நடவடிக்கை மேற்கொள்ளுமாறு இந்திய தேர்தல் ஆணையத்தில் கழக அமைப்புச் செயலாளர் திரு @RSBharathiDMK அவர்கள் புகார்! pic.twitter.com/XZObRlkxEA
— DMK (@arivalayam) March 20, 2024