ಬೆಂಗಳೂರು : ನನಗೆ ಸಚಿವ ಸ್ಥಾನ ಬೇಡ, ಡಿ.ಕೆ. ಶಿವಕುಮಾರ್ ಅವರು ಸಿಎಂ ಆದ್ರೆ ಸಾಕು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕೆಂದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಮುಂದೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ಅಧಿಕಾರದ ಒಂಡಬಡಿಕೆ ವಿಚಾರ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಶಾಸಕನಾಗಿ 6 ತಿಂಗಳಾಗಿದೆ. ಕಾಂಗ್ರೆಸ್ ನಲ್ಲಿ ನಾನು ಸಕ್ರೀಯವಾಗಿ ಓಡಾಡುತ್ತಿಲ್ಲ. ಚನ್ನಪಟ್ಟಣ ತಾಲೂಕಿನ ಕೆಲಸ ಮಾಡಿಕೊಂಡಿದ್ದೇನೆ. ನನಗೆ ಮಂತ್ರಿ ಸ್ಥಾನದ ಆಸಕ್ತಿ ಇಲ್ಲ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ್ರೆ ಬೆಂಬಲ ನೀಡುತ್ತೇನೆ ಎಂದರು.