ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಸ್ಐಟಿ ಅಧಿಕಾರಿಗಳು ದೂರುದಾರ ಮಾಸ್ಕ್ ಮ್ಯಾನ್ ಅನ್ನು ಅರೆಸ್ಟ್ ಮಾಡಿದ್ದಾರೆ ಇಂದು ಅರೆಸ್ಟ್ ಮಾಡಿ ಬೆಳ್ತಂಗಡಿಯ ಸಿವಿಲ್ ಮತ್ತು JMFC ಕೋರ್ಟಿಗೆ ಹಾಜರುಪಡಿಸಲಿದ್ದು ಮಾಸ್ಕ್ ಮ್ಯಾನ್ ಕಸ್ಟರ್ಡಿನ ಅಥವಾ ನ್ಯಾಯಾಂಗ ಬಂಧನ ಎನ್ನುವುದು ಕೆಲವೇ ಕ್ಷಣಗಳಲ್ಲಿ ತಿಳಿದು ಬರಲಿದೆ ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಸ್ಕ್ ಮ್ಯಾನ್ ನನ್ನು ಸಂಶಯ ಬಂದು ವಶಕ್ಕೆ ತಗೊಂಡಿದ್ದಾರಾ ಅಥವಾ ಯಾವ ಉದ್ದೇಶದಿಂದ ಅವನನ್ನು ವಶಕ್ಕೆ ವಶಕ್ಕೆ ತೆಗೆದುಕೊಂಡಿದ್ದರೋ ಅವರಿಗೆ ಗೊತ್ತು. ದೂರುದಾರನ ಆಧಾರದ ಮೇಲೆ ನಾವು ತನಿಖೆ ಪ್ರಾರಂಭ ಮಾಡಿದ್ದೇವೆ ಈಗ ಅವರನ್ನು ಅರೆಸ್ಟ್ ಮಾಡಿ ಅವನ ಹೇಳಿಕೆ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ. ಅವರು ಹೇಳಿದ್ದನ್ನೆಲ್ಲ ನಾನು ನಿಮಗೆ ಹೇಳೋಕೆ ಆಗಲ್ಲ ಎಂದರು.
ಮಾಸ್ಕ್ ಮ್ಯಾನ್ ಅರೆಸ್ಟ್ ಆಗಿರೋದು ಅಂತ ಅಷ್ಟೇ ಗೊತ್ತು ಅದನ್ನೇ ಹೇಳಿದ್ದೇನೆ ಎಸ್ ಐ ಟಿ ಅವರು ಏನು ಹೇಳಿದರು ಅದನ್ನು ಹೇಳಕ್ಕೆ ಆಗಲ್ಲ. ತನಿಖೆ ಆಗುವಾಗ ಯಾವುದೇ ಮಾಹಿತಿ ಹೇಳಬಾರದು. ಎಸ್ಐಟಿ ಅಧಿಕಾರಿಗಳಿಗೆ ತನಿಖೆ ಕೊಟ್ಟ ಮೇಲೆ ಯಾವ ರೀತಿಯಲ್ಲಿ ತನಿಖೆ ಮಾಡಬೇಕು ಎಂದು ನಾವು ಅವರಿಗೆ ಹೇಳಲು ಆಗಲ್ಲ ಎಸ್ಐಟಿ ವರದಿ ಬಂದ ಬಳಿಕವಷ್ಟೇ ಸತ್ಯ ಹೊರಗಡೆ ತರಬೇಕು. ಸತ್ಯ ಹೊರಗಡೆ ಬರಲು ಮಾಸ್ಕ್ ಮ್ಯಾನ್ ಗೆ ಯಾವ ಮೆಥಡ್ ಬಳಸುತ್ತಾರೆ ಅದನ್ನು ನಾವು ಹೇಳೋಕ್ ಆಗಲ್ಲ ಅದು ಎಸ್ಐಟಿ ಅಧಿಕಾರಿಗಳಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.