ಬೆಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆಗೆ ಮತ್ತಷ್ಟು ಚುರುಕು ಸಿಕ್ಕಿದ್ದು, ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೋಹಂತಿ ಭೇಟಿಯಾಗಿದ್ದಾರೆ. ಎಸ್ ಐ ಟಿ ತನಿಖಾ ಪ್ರಗತಿಯ ಬಗ್ಗೆ ಗೃಹ ಸಚಿವರ ಜೊತೆಗೆ ಪ್ರಣಬ್ ಮೋಹಂತಿ ಚರ್ಚಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮಹಾತೆ ಗೃಹ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಎಸ್ಐಟಿ ತನಿಖಾ ಪ್ರಗತಿಯ ಬಗ್ಗೆ ಚರ್ಚಿಸಿದರು ಧರ್ಮಸ್ಥಳ ಪ್ರಗತಿ ಕುರಿತು ಗೃಹ ಸಚಿವರಿಗೆ ಪ್ರಣಬ್ ಭವಂತಿ ಮಾಹಿತಿ ನೀಡಿದ್ದಾರೆ. ಇನ್ನು ನ್ಯಾಯಾಧೀಶರ ಮುಂದೆ ಆರೋಪಿ ಚಿನ್ನಯನನ್ನು ಅಧಿಕಾರಿಗಳು ಹಾಜರುಪಡಿಸಿದ್ದು ಬಿಎನ್ಎನ್ಎಸ್ 183 ಅಡಿ ಚಿನ್ನಯ್ಯ ಹೇಳಿಕೆ ದಾಖಲಿಸಲಿದ್ದಾನೆ.