ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನಡೆದ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೋರ್ಟಿಗೆ ಟಾರ್ಸಿಟ್ ಹಾಗೂ ಸುಳ್ಳು ಸಾಕ್ಷಿ ವರದಿ ಸಲ್ಲಿಸಲಾಯಿತು ತನಿಕ ಅಧಿಕಾರಿ ಜಿತೇಂದ್ರ ಕುಮಾರ್ ನೇತೃತ್ವದಲ್ಲಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಲಾಯಿತು.
ಹೌದು ಬೆಳ್ತಂಗಡಿ ಕೋರ್ಟಿಗೆ ಎಸ್ಐಟಿ ಅಧಿಕಾರಿಗಳು ಚಾರ್ಜ್ ಶೀಟ್ ಮತ್ತು ಸುಳ್ಳು ಸಾಕ್ಷಿ ವರದಿಯನ್ನು ಸಲ್ಲಿಸಿದೆ. ಸುಮಾರು 3923 ಪುಟಗಳ ವರದಿಯನ್ನು ಅಧಿಕಾರಿಗಳು ಸಲ್ಲಿ ಸಿದರು. ಸೆಕ್ಷನ್ 25 ರ ಅಡಿಯಲ್ಲಿ ಸುಳ್ಳು ಸಾಕ್ಷಿ ವರದಿ ಸಲ್ಲಿಸಿತು. , ಬೆಳ್ತಂಗಡಿಯ ಹೆಚ್ಚುವರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಷಡ್ಯಂತರದಲ್ಲಿ ಬುರುಡೆ ಚಿನ್ನಯ್ಯ ಸೇರಿದಂತೆ ಆರು ಮಂದಿ ಭಾಗಿಯಾಗಿದ್ದಾರೆ ಎಂದು ಎಸ್ಐಟಿ ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಮಾಡಿದೆ. ಚೆನ್ನಯ್ಯ, ಮಹೇಶ್ ತಿಮ್ಮರೋಡಿ, ಗಿರೀಶ್ ಮಟಣ್ಣನವರ್, ಜಯಂತ್ ಟಿ, ವಿಠ್ಠಲ್ ಗೌಡ ಹಾಗೂ ಸುಜಾತಾ ಭಟ್ ಈ ರೀತಿ ಷಡ್ಯಂತರ ರೂಪಿಸಿದ್ದರು ಎಂದು ಅಧಿಕಾರಿಗಳು ಉಲ್ಲೇಖಿಸಿದ್ದು, 7 ಫೈಲ್ಗಳಲ್ಲಿ ಎಸ್ಐಟಿ ಅಧಿಕಾರಿಗಳು ವರದಿ ತಯಾರು ಮಾಡಿದರು ತನಿಕ ಅಧಿಕಾರಿ ಜಿತೇಂದ್ರ ಕುಮಾರ್ ನೇತೃತ್ವದ ತಂಡ ಇದೀಗ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದೆ







