ಹಾಸನ : ಎಚ್ ಡಿ ದೇವೇಗೌಡರು ಯಾರನ್ನು ಬೆಳೆಸಲು ಇಷ್ಟಪಡುವುದಿಲ್ಲ. ಬೇರೆಯವರನ್ನು ಇರಲಿ ಒಕ್ಕಲಿಗರನ್ನೇ ಎಚ್ ಡಿ ದೇವೇಗೌಡರು ಬೆಳೆಸಲಿಲ್ಲ. 1994 ರಲ್ಲಿ ನಾನು ಜಾಲಪ್ಪ ಇಲ್ಲದಿದ್ದರೆ ನೀವು ಸಿಎಂ ಆಗುತ್ತಿರಲಿಲ್ಲ. ಎಚ್ ಡಿ ದೇವೇಗೌಡರು ಯಾರನ್ನು ಬೆಳೆಸುವುದಕ್ಕೆ ಇಷ್ಟಪಡಲ್ಲ. ನಾನು ಜಾಲಪ್ಪನವರು ದೇವೇಗೌಡರ ಅವರ ಜೊತೆ ನಿಲ್ಲದೆ ಹೋಗಿದ್ದರೆ. ಎಚ್ ಡಿ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಹಾಸನದಲ್ಲಿ ದೇವೇಗೌಡರು ಕಣ್ಣೀರು ಆಗಬೇಕಿತ್ತು ಅಲ್ವಾ? ರೈತರಿಗಾಗಿ ಇವರು ಒಂದು ದಿನವೂ ಕಣ್ಣೀರು ಹಾಕಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ HD ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಹಾಸನ ಜಿಲ್ಲೆಯ ಎಸ ಎಂ ಕೃಷ್ಣ ನಗರದಲ್ಲಿ ಕಾಂಗ್ರೆಸ್ ಜನಕಲ್ಯಾಣ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು, ಈ ಒಂದು ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಗುಡುಗಿದರು. ಇದೆ ವೇಳೆ ಮೇಕೆದಾಟು ಯೋಜನೆಗೆ ಕೇಂದ್ರ ಸಚಿವರಾಗಿರುವಂತಹ ಹೆಚ್ ಡಿ ಕುಮಾರಸ್ವಾಮಿ ಅವರು ಅನುಮತಿ ಕೊಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.
ರಾಜ್ಯದ ಮೂರು ಉಪಚುನಾವಣೆಗಳಲ್ಲಿ ನಾವೇ ಗೆದ್ದಿದ್ದೇವೆ. ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಇ ತುಕಾರಾಂ ಶಾಸಕರಾಗಿದ್ದರು.ಚನ್ನಪಟ್ಟಣ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆದ್ದಿರಲಿಲ್ಲ. ಆದರೆ ನಮ್ಮ ಮತದಾರರ ಆಶೀರ್ವಾದದಿಂದ ಮೂರು ಕ್ಷೇತ್ರಗಳಲ್ಲೂ ಗೆದ್ದೆವು. ಹೀಗಾಗಿ ಮತದಾರರ ಕೃತಜ್ಞತೆ ಸಲ್ಲಿಸಲು ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಇದು ಅತ್ಯಂತ ಮಹತ್ವದ ಸಮಾವೇ.ಶ. ನನ್ನ ರಾಜಕೀಯ ಜೀವನದಲ್ಲಿ ಹಾಸನದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಮಾವೇಶ ಆಗಿಲ್ಲ.
ಹಾಸನದಲ್ಲಿ ಏಕೆ ಈ ಸಮಾವೇಶ ಮಾಡುತ್ತಿದ್ದಾರೆ ಎಂದು ವ್ಯಾಖ್ಯಾನ ಮಾಡುತ್ತಿದ್ದರು.ಮೈಸೂರಲ್ಲಿ ಅನೇಕ ಸಮಾವೇಶಗಳು ಆಗಿವೆ. ಆದರೆ ಹಾಸನದಲ್ಲಿ ಸಮಾವೇಶ ಆಗಿಲ್ಲ. ಈ ಬಗ್ಗೆ ಸಚಿವ ಕೆ ಎನ್ ರಾಜಣ್ಣ ಶಾಸಕ ಶಿವಲಿಂಗೇಗೌಡ ಜೊತೆಗೆ ಚರ್ಚಿಸಿದೆ.ಮಹದೇವಪ್ಪ ಕೆ ವೆಂಕಟೇಶ್ ಕೂಡ ಹಾಸನದಲ್ಲಿ ಸಮಾವೇಶಕ್ಕೆ ನಿರ್ಧರಿಸಿದ್ದರು. ಕಾಂಗ್ರೆಸ್ ಮಾತ್ರವಲ್ಲ ಸ್ವಾಭಿಮಾನ ಒಕ್ಕೂಟ ಸಹಯೋಗದಲ್ಲಿ ಸಮಾವೇಶ ಮಾಡಲಾಗುತ್ತಿದೆ. ಕೃತಜ್ಞತಾ ಸಮಾವೇಶಕ್ಕೆ ಸ್ವಾಭಿಮಾನಿಗಳ ಒಕ್ಕೂಟ ತೀರ್ಮಾನಿಸಿತ್ತು ಎಂದರು.
ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿ. ಈಗ ಅಧಿಕಾರಕ್ಕೆ ಬಂದಾಗ 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದು ಯಾರು? ಹೆಚ್ಚುವರಿ ಅಕ್ಕಿ ಕೊಡಿ ಎಂದಾಗ ಕೇಂದ್ರ ಸರ್ಕಾರ ಕೊಡಲಿಲ್ಲ. ಹೆಚ್ಚುವರಿ ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೆ ಕಾಂಗ್ರೆಸ್. 56 ಸಾವಿರ ಕೋಟಿ ಬಳಸಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಗ್ಯಾರೆಂಟಿಗಳನ್ನು ಜಾರಿಗೊಳಿಸಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಹೇಳಿದ್ದರು. ಗ್ಯಾರೆಂಟಿಗಳನ್ನು ವಿರೋಧ ಮಾಡುವವರು ಬಡವರ ವಿರೋಧಿಗಳು.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಸರಿಯಾಗಿ ನೀಡುತ್ತಿಲ್ಲ. ಕೇಂದ್ರ ಸರ್ಕಾರ ನಮಗೆ ನ್ಯಾಯಯುತವಾಗಿ ತೆರಿಗೆ ಹಂಚಿಕೆ ಮಾಡುತ್ತಿಲ್ಲ. ರಾಜ್ಯದಿಂದ ನಾವು ಕೇಂದ್ರಕ್ಕೆ ಕಟ್ಟುವ ತೆರಿಗೆ ಪಾಲಿನಲ್ಲಿ ನಮಗೆ ಪುನಃ ಬರುವುದು ಕೇವಲ ಐವತ್ತು ಸಾವಿರ ಕೋಟಿ ಮಾತ್ರ ಯಾವತ್ತಾದರೂ ದೇವೇಗೌಡರು ಕುಮಾರಸ್ವಾಮಿ ಈ ಕುರಿತು ಕೇಳಿದ್ದಾರಾ? ಮೇಕೆದಾಟು ಯೋಜನೆಗೆ ಕುಮಾರಸ್ವಾಮಿ ಅನುಮತಿ ಕೊಡಿಸಲಿ. ಎಚ್ ಡಿ ದೇವೇಗೌಡರು ನನಗಿಂತ 15 ವರ್ಷ ದೊಡ್ಡವರು. ದೇವೇಗೌಡರು ಸಿದ್ದರಾಮಯ್ಯನ ಗರ್ವಭಂಗ ಮಾಡುತ್ತೇನೆ ಎಂದರು, ಸಿದ್ದರಾಮಯ್ಯನವರಿಗೆ ದುರಹಂಕಾರ ಬಂದಿದೆ ಅಂದ್ರು, ಸರ್ಕಾರವನ್ನು ಕಿತ್ತುಗೇರಿ ಅಂದರು ದೇವೇಗೌಡರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ಅಲ್ವೇ? ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆಗ್ಲಿಲ್ಲ ಸುಭದ್ರ ಸರ್ಕಾರವನ್ನು ನೀಡಿದೆ 2013ರಲ್ಲಿ ಅಧಿಕಾರಕ್ಕೆ ಬಂದಾಗ ನಾವು ನೂರಾರು ಜನರು ಭರವಸೆಗಳನ್ನು ನೀಡಿದ್ದೆವು. ಆಗ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೆವು. ಕೊಟ್ಟ ಮಾತಿನಂತೆ ನಡೆದಿದ್ದು ನಮ್ಮ ಸರ್ಕಾರ. ಜೆಡಿಎಸ್ ಬಿಜೆಪಿಯವರು ಬಿಪಿಎಲ್ ಕಾರ್ಡ್ ಬಗ್ಗೆ ಬಹಳ ಮಾತನಾಡುತ್ತಾರೆ. ಉಚಿತವಾಗಿ ಐದು ಕೆಜಿ ಅಕ್ಕಿ ಕೊಟ್ಟವರು ಯಾರು? ಯಾರು ಹಸಿವಿನಿಂದ ಮಲಗಬಾರದೆಂದು ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ ಎಂದು ತಿಳಿಸಿದರು.