ಚಂಡೀಗಢ : ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಮಾನ್ಯಗೊಂಡ ಎಂಟು ಮತಪತ್ರಗಳೊಂದಿಗೆ ಮರು ಎಣಿಕೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಚಂಡೀಗಢ ಮೇಯರ್ ಚುನಾವಣೆ ನಡೆಸಿದ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರನ್ನ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಅಮಾನ್ಯವೆಂದು ತಿರಸ್ಕರಿಸಿದ ಮತಪತ್ರಗಳನ್ನ ಎಲ್ಲಿ ವಿರೂಪಗೊಳಿಸಲಾಗಿದೆ ಎಂಬುದನ್ನ ಸಾಬೀತುಪಡಿಸುವಂತೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, “ಮತದಾನದಲ್ಲಿನ ಮತಗಳನ್ನ ಮರು ಎಣಿಕೆ ಮಾಡಲಾಗುವುದು ಮತ್ತು ಈ 8 ಮತಗಳನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಲಾಗುವುದು ಎಂದು ನಾವು ನಿರ್ದೇಶಿಸುತ್ತೇವೆ” ಎಂದು ಹೇಳಿದೆ. ಅಮಾನ್ಯಗೊಂಡ ಎಲ್ಲಾ ಎಂಟು ಮತಪತ್ರಗಳಲ್ಲಿ ಎಎಪಿ ಮೇಯರ್ ಅಭ್ಯರ್ಥಿ ಕುಲದೀಪ್ ಕುಮಾರ್ ಅವರ ಪರವಾಗಿ ಮತಗಳು ಚಲಾವಣೆಯಾಗಿವೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
BREAKING : ಮಾ.22ರಿಂದ ಕ್ರಿಕೆಟ್ ಹಬ್ಬ ‘IPL 2024’ ಆರಂಭ ; ಲೀಗ್ ಅಧ್ಯಕ್ಷ ‘ಅರುಣ್ ಧುಮಾಲ್’ ಘೋಷಣೆ
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ‘ದೀಪಿಕಾ, ರಣವೀರ್’ ದಂಪತಿಗಳು : ವರದಿ