ನವದೆಹಲಿ : ಇಡಿ ಸಮನ್ಸ್ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಇಡಿ ಇಂದು ನನಗೆ ನಾಲ್ಕನೇ ನೋಟಿಸ್ ಕಳುಹಿಸಿದೆ ಮತ್ತು ಜನವರಿ 18 ಅಥವಾ 19 ರಂದು ಅವರ ಮುಂದೆ ಹಾಜರಾಗುವಂತೆ ಕೇಳಿದೆ. ಈ ನಾಲ್ಕು ನೋಟಿಸ್’ಗಳು ಕಾನೂನುಬಾಹಿರ ಮತ್ತು ಅಮಾನ್ಯವಾಗಿವೆ. ಅಂತಹ ನೋಟಿಸ್ಗಳನ್ನು ಇಡಿ ಕಳುಹಿಸಿದಾಗಲೆಲ್ಲಾ, ಅವುಗಳನ್ನ ನ್ಯಾಯಾಲಯವು ರದ್ದುಗೊಳಿಸುತ್ತದೆ” ಎಂದರು.
ಇನ್ನು “ಈ ನೋಟಿಸ್’ಗಳು ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿವೆ. ಈ ಪ್ರಕರಣದಲ್ಲಿ 2 ವರ್ಷಗಳಿಂದ ತನಿಖೆ ನಡೆಯುತ್ತಿದೆ. ಆದ್ರೆ, ಅವರು ಏನನ್ನೂ ವಶಪಡಿಸಿಕೊಳ್ಳಲಿಲ್ಲ. ಲೋಕಸಭಾ ಚುನಾವಣೆಗೆ 2 ತಿಂಗಳ ಮೊದಲು ನನ್ನನ್ನು ಏಕೆ ಕರೆಯಲಾಗಿದೆ.? ಇಡಿಯನ್ನ ಬಿಜೆಪಿ ನಡೆಸುತ್ತಿದೆ. ಅವರ ಏಕೈಕ ಉದ್ದೇಶವೆಂದರೆ ನನ್ನನ್ನು ಬಂಧಿಸುವುದು, ಇದರಿಂದ ನಾನು ಚುನಾವಣೆಗೆ ಪ್ರಚಾರ ಮಾಡಲು ಸಾಧ್ಯವಿಲ್ಲ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಸಚಿನ್ ತೆಂಡೂಲ್ಕರ್ ಡೀಪ್‌ಫೇಕ್ ವಿಡಿಯೋ: ಗೇಮಿಂಗ್ ವೆಬ್‌ಸೈಟ್, ಫೇಸ್‌ಬುಕ್ ಪುಟದ ವಿರುದ್ದ ‘ಎಫ್‌ಐಆರ್’ ದಾಖಲು
‘ಪ್ರಧಾನಿ ಮೋದಿ’ಯಿಂದ ಅಯೋಧ್ಯೆ ರಾಮ ಮಂದಿರಕ್ಕೆ ಸಮರ್ಪಿತವಾದ ‘ಅಂಚೆ ಚೀಟಿ’ ಬಿಡುಗಡೆ