ನವದೆಹಲಿ : ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ಶಾಮಿಲಾಗಿದ್ದ ಮೋಸ್ಟ್ ವಾಂಟೆಡ್ ಉಗ್ರಗಾಮಿ, ನಿಷೇಧಿತ ಸೆಮಿ ಸಂಘಟನೆಯ ಉಗ್ರ ಹನೀಫ್ ಶೇಖ್ನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಹೆಸರು ಬದಲಾಯಿಸಿಕೊಂಡು ತಲೆಮರೆಸಿಕೊಂಡು ಓಡಾಡುತಿದ್ದ ಈತನನ್ನು ದೆಹಲಿ ಪೊಲೀಸ್ ವಿಶೇಷ ದಳ ಬಂಧಿಸಿದೆ.
LIFE STYLE: ಕಾಫಿ ಫೇಸ್ ಪ್ಯಾಕ್ ಹಾಕಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!
ಆರೋಪಿಯು ಮಹಾರಾಷ್ಟ್ರದ ಉರ್ದು ಶಾಲೆಯೊಂದರಲ್ಲಿ ಮಾರುವೇಷದಲ್ಲಿ ಪಾಠ ಮಾಡುತ್ತಿದ್ದ. 2001ರಲ್ಲಿ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಮತ್ತು ದೇಶದ್ರೋಹ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದ, ಹಲವು ಬಾರಿ ಸಭೆಗಳನ್ನು ನಡೆಸಿ ಕುಕೃತ್ಯಗಳಿಗೆ ಸಂಚು ಹೂಡಿದ್ದ ಎನ್ನಲಾಗಿದೆ.
ವಾರಣಾಸಿ ‘ಜ್ಞಾನವಾಪಿ ಮಸೀದಿ’ ಯಲ್ಲಿ ಪೂಜೆ ವಿಚಾರ : ಇಂದು ಅಲಹಾಬಾದ್ ಹೈಕೋರ್ಟ್ ನಿಂದ ಮಹತ್ವ ತೀರ್ಪು
ಹನೀಫ್ ಸಿಮಿ ಸಂಘಟನೆಯ ನಿಯತಕಾಲಿಕೆ ಇಸ್ಲಾಮಿಕ್ ಮೂವ್ಮೆಂಟ್ ಸಂಪಾದಕನಾಗಿದ್ದ. ಆರೋಪಿಯು ಕಳೆದ 25 ವರ್ಷಗಳ ಅವಧಿಯಲ್ಲಿ ಯುವಕರಿಗೆ ಮೂಲಭೂತವಾದದ ಬಗ್ಗೆ ಪ್ರಚೋದನೆ ನೀಡಿದ್ದ. ಮಹಾರಾಷ್ಟ್ರದಲ್ಲಿ ಹಲವು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ. ಅನೇಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಆತ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING:ಬುರ್ಕಿನಾ ಫಾಸೊ ಚರ್ಚ್‌ನ ಮೇಲೆ ‘ಭಯೋತ್ಪಾದಕರ’ ದಾಳಿ: 15 ಮಂದಿಗೂ ಹೆಚ್ಚು ಸಾವು