ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಹಲವು ಎಕ್ಸಿಟ್ ಪೋಲ್ ಗಳ ಪ್ರಕಾರ ಈ ಬಾರಿ ಬಿಜೆಪಿ ಬಹುಮತ ಪಡೆದುಕೊಂಡು ಗೆಲುವು ಸಾಧಿಸಲಿದೆ, ಅಲ್ಲದೇ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ ಎಂದು ಹಲವು ಸಮೀಕ್ಷೆ ಗಳ ಎಕ್ಸಿಟ್ ಪೋಲ್ ನಲ್ಲಿ ತಿಳಿದು ಬಂದಿದೆ.
ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಬಿಜೆಪಿಗೆ ಹೆಚ್ಚಿನ ಸ್ಥಾನ ದೊರೆಯಲಿದ್ದು, ಬಿಜೆಪಿ ಈ ಬಾರಿ 35 ರಿಂದ 40 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಡಿವಿ ರಿಸರ್ಚ್ ಅಂತೆ ಆಪ್ ಗೆ 26 ರಿಂದ 34 ಸ್ಥಾನ, ಬಿಜೆಪಿಗೆ 36 ರಿಂದ 34 ಸ್ಥಾನ ಹಾಗೂ ಕಾಂಗ್ರೆಸ್ ಗೆ 0 ಮತ್ತು ಇತರರು 0 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನು ಅದೇ ರೀತಿಯಾಗಿ ಪೀಪಲ್ಸ್ ಇನ್ಸೈಟ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಬಹುಮತ ಸಿಗುವ ಸಾಧ್ಯತೆ ಇದ್ದು, 40 ರಿಂದ 44 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪಿ ಮಾರ್ಕ್ ಸಂಸ್ಥೆ ಪ್ರಕಾರ ಆಪ್ 29 ರಿಂದ 31, ಬಿಜೆಪಿ 39 ರಿಂದ 49 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಈ ಸಂಸ್ಥೆಯ ಎಕ್ಸಿಟ್ ಪೋಲ್ ಪ್ರಕಾರ ತಿಳಿದು ಬಂದಿದೆ.
ಅದೇ ರೀತಿಯಾಗಿ ಪೀಪಲ್ಸ್ ಪಲ್ಸ್ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಬಂದಿದ್ದು ಬಿಜೆಪಿಗೆ 51 ರಿಂದ 60 ಕ್ಷೇತ್ರಗಳಲ್ಲಿ ಗೆಲುವು ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದು, ಆಮ್ ಆದ್ಮಿ ಪಾರ್ಟಿಗೆ 10 ರಿಂದ 19 ಸ್ಥಾನ ಪಡೆಯುವ ಸಾಧ್ಯತೆಯಿದ್ದು ಕಾಂಗ್ರೆಸ್ ಯಾವುದೇ ಸ್ಥಾನ ಪಡೆದುಕೊಂಡಿಲ್ಲ ಎಂದು ತಿಳಿದುಬಂದಿದೆ.ಪೋಲ್ ಡೈರಿ ಸಮೀಕ್ಷೆ ಪ್ರಕಾರ ಬಿಜೆಪಿಗೆ ಬಹುಮತ ಸಿಗಲಿದ್ದು ಬಿಜೆಪಿಗೆ ಸಮೀಕ್ಷೆ ಪ್ರಕಾರ 42 ರಿಂದ 50 ಸ್ಥಾನ ಸಿಗುವ ಸಾಧ್ಯತೆ ಇದೆ ಅದೇ ರೀತಿಯಾಗಿ ಪಕ್ಷಕ್ಕೆ 18 ರಿಂದ 25 ಸ್ಥಾನಗಳಲ್ಲಿ ಗೆಲ್ಲಲಿದೆ. ಇನ್ನೂ ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಸಾಧ್ಯತೆ ಇದೆ ಎಂದು ಈ ಒಂದು ಎಕ್ಸಿಟ್ ಪೋಲ್ ತಿಳಿಸಿದೆ.