ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನೀಡಿದ 8ನೇ ಸಮನ್ಸ್ ಗೆ ಕೇಜ್ರಿವಾಲ್ ಗೈರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲಗೆ ಇದೀಗ ದೆಹಲಿ ಕೋರ್ಟ್ ನೋಟಿಸ್ ನೀಡಿದೆ. ದೆಹಲಿ ರೋಸ್ ಅವೆನ್ಯೂ ಕೋರ್ಟ್ನಿಂದ ಮಾರ್ಚ್ 16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ನಾಳೆಯ ‘ಮಹಾ ಶಿವರಾತ್ರಿ’ಯಂದು ‘ಈ ಮಂತ್ರ’ವನ್ನು ಪಠಿಸಿ: ನಿಮ್ಮ ‘ಎಲ್ಲಾ ಕಷ್ಟ’ಗಳು ದೂರ
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ರೌಸ್ ಅವೆನ್ಯೂ ಕೋರ್ಟ್ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಾರ್ಚ್ 16 ರಂದು ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯ (ED) ಅವರ ವಿರುದ್ಧ ಎರಡನೇ ದೂರನ್ನು ದಾಖಲಿಸಿ ನ್ಯಾಯಾಲಯವನ್ನು ಸಂಪರ್ಕಿಸಲಾಗಿತ್ತು. -ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ಸಮನ್ಸ್‌ಗೆ ಗೈರಾಗಿರುವ ಹಿನ್ನೆಲೆ ಇದೀಗ ಸಮನ್ಸ್ ಜಾರಿ ಮಾಡಿದೆ.
ಸೇನಾ ನೆಲೆಗೆ ಭೇಟಿ ನೀಡಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್, ಯುದ್ಧಕ್ಕೆ ಸಿದ್ಧರಾಗಿರುವಂತೆ ಸೇನೆಗೆ ಸೂಚನೆ
ಹಿಂದಿನ ಸಮನ್ಸ್‌ಗಳಿಗೆ ಬದ್ಧರಾಗಿರಲು ವಿಫಲರಾದ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯವು ಹಿಂದಿನ ಕಾನೂನು ಕ್ರಮಗಳ ಹಿನ್ನೆಲೆಯಲ್ಲಿ ಈ ಇತ್ತೀಚಿನ ಬೆಳವಣಿಗೆಯಾಗಿದೆ. ಇಡಿ ನೀಡಿದ ಆರಂಭಿಕ ಮೂರು ಸಮನ್ಸ್‌ಗಳಿಗೆ ಸಂಬಂಧಿಸಿದ ಹಿಂದಿನ ದೂರಿನ ವಿಚಾರಣೆಯನ್ನು ಮಾರ್ಚ್ 16 ಕ್ಕೆ ನಿಗದಿಪಡಿಸಲಾಗಿದೆ.