ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಿಗ ಮತ್ತೊಬ್ಬ ಸಂಚುಕೋರ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ದೆಹಲಿ ಕಾರು ಸ್ಫೋಟದಲ್ಲಿ ಭಯೋತ್ಪಾದಕ ಉಮರ್ ಗೆ ಸಹಾಯ ಮಾಡಿದ ಸಕ್ರಿಯ ಸಹ-ಸಂಚುಕೋರ ಜಾಸಿರ್ ಬಿಲಾಲ್ ಅಲಿಯಾಸ್ ಡ್ಯಾನಿಶ್. ಜೈಶ್-ಎ-ಮೊಹಮ್ಮದ್ ಸಂಘಟನೆಯ ಆಶ್ರಯದಲ್ಲಿ ವೈದ್ಯರನ್ನು ಬ್ರೈನ್ ವಾಶ್ ಮಾಡಿದವನು ಈತ.
ಡ್ಯಾನಿಶ್.. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ. ಇವನು ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡಿದ್ದಾನೆ. ಇವನ್ನು ಶ್ರೀನಗರದಲ್ಲಿ NIA ಅಧಿಕಾರಿಗಳು ಬಂಧಿಸಿದರು. ಇವನನ್ನು ಡ್ರೋನ್ ತಜ್ಞ ಎಂದು ಗುರುತಿಸಲಾಗಿದೆ. ಇವನು ಡ್ರೋನ್ಗಳ ಮೂಲಕ ಅತ್ಯಂತ ಶಕ್ತಿಶಾಲಿ ಬಾಂಬ್ಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದ. ಡಾ. ಉಮರ್ ಜೊತೆಗೆ ಈ ಯೋಜನೆಯನ್ನು ಬರೆದಿದ್ದಾನೆ. ಡ್ಯಾನಿಶ್ ಭಯೋತ್ಪಾದಕ ಮಾಡ್ಯೂಲ್ ನಲ್ಲಿ ಸಂಚುಕೋರ ಕೂಡ. ಡ್ರೋನ್ಗಳು ಮತ್ತು ರಾಕೆಟ್ಗಳ ಮೂಲಕ ಶಕ್ತಿಶಾಲಿ ಬಾಂಬ್ಗಳನ್ನು ಹೇಗೆ ಸ್ಫೋಟಿಸಬೇಕೆಂದು ತಿಳಿದಿತ್ತು. ಅದಕ್ಕೆ ಡ್ಯಾನಿಶ್ ತಾಂತ್ರಿಕ ನೆರವು ನೀಡಿದ್ದ. ಡ್ರೋನ್ಗಳು ಭಾರೀ ಬಾಂಬ್ಗಳನ್ನು ಹೊತ್ತೊಯ್ಯಬಲ್ಲ ದೊಡ್ಡ ಬ್ಯಾಟರಿಗಳನ್ನು ಹೊಂದಿವೆ ಎಂದು ತನಿಖಾಧಿಕಾರಿಗಳು ಈಗಾಗಲೇ ಕಂಡುಕೊಂಡಿದ್ದಾರೆ.








