ದಕ್ಷಿಣಕನ್ನಡ : ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಶವಗಳನ್ನು ಹೂತುಹಾಕಿರುವ ಬಗ್ಗೆ ಅನಾಮಿಕ ವ್ಯಕ್ತಿ ದೂರುಕೊಟ್ಟ ಬಳಿಕ, ಎಸ್‌ಐಟಿ ತಂಡ ತನಿಖೆ ನಡೆಸುತ್ತಿದ್ದು, ಮಂಗಳವಾರ ದೂರುದಾರ ತೋರಿಸಿದ ಜಾಗದಲ್ಲಿ ಅಗೆಯಲು ಆರಂಭ ಮಾಡಿತ್ತು. ಆದರೆ ಮೊದಲ ದಿನ ಆತ ತೋರಿಸಿದ ಜಾಗದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. ಇಂದು ಸಹ ಶೋಧ ಕಾರ್ಯ ಮುಂದುವರೆದಿದ್ದು ಯಾವುದೇ ಅಸ್ತಿಪಂಜರ ದೊರೆತಿಲ್ಲ.
ಆದರೆ ಇದೀಗ ಸೈಟ್ ನಂಬರ್ ಒಂದರಲ್ಲಿ ಎಸ್ಐಟಿ ಅಧಿಕಾರಿಗಳಿಗೆ 2.5 ಅಡಿ ಆಳದಲ್ಲಿ ಮಹಿಳೆಯ ಕೆಂಪು ರವಿಕೆ ಸಿಕ್ಕಿದೆ. ಅಲ್ಲದೆ ಪಾನ್ ಕಾರ್ಡ್ ಎಟಿಎಂ ಕಾರ್ಡ್ ಆಗಿದೆ. ಇಷ್ಟೆಲ್ಲ ವಸ್ತುಗಳು ಪತ್ತೆ ಆಗಿರುವುದನ್ನು ಎಸ್ಐಟಿ ದೃಢಪಡಿಸಿದೆ. ಎಟಿಎಂ ಕಾರ್ಡ್ ನಲ್ಲಿ ಪುರುಷನ ಹೆಸರು ನಮಗಾಗಿದ್ದು ಲಕ್ಷ್ಮಿ ಎಂಬ ಹೆಸರಿನ ಮಹಿಳೆಯ ಪಾನ್ ಕಾರ್ಡ್ ಪತ್ತೆಯಾಗಿದೆ ಒಂದು ಬ್ಯಾಗ್ ಕೂಡ ಪತ್ತೆ ಆಗಿರುವ ಬಗ್ಗೆ ಎಸ್ಐಟಿ ಮಾಹಿತಿ ನೀಡಿದೆ.
ಇಂದು ಎರಡನೇ ಜಾಗದಲ್ಲಿ ಕಾರ್ಯಾಚರಣೆ ಆರಂಭ ಆಗಿದ್ದು,. ಇಂದು ಏಕಕಾಲದಲ್ಲಿ 3 ಕಡೆ ಅಗೆಯಲಾಗಿದೆ. ಈಗಾಗಲೇ ನೇತ್ರಾವತಿ ಸ್ನಾನಘಟ್ಟದ ಪ್ರದೇಶಕ್ಕೆ ಮುಸುಕುದಾರಿಯಾಗಿರುವ ದೂರುದಾರ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ್ದಾನೆ. ಎಸ್‌ಐಟಿ ತಂಡದ ಅಧಿಕಾರಿಗಳೂ ಸ್ಥಳಕ್ಕೆ ಬಂದಿದ್ದಾರೆ. ಜೊತೆಗೆ ಆತ ತೋರಿಸಿದ ಜಾಗದಲ್ಲಿ ಗುಂಡಿ ಅಗೆಯಲು ಬೇಕಾದ ಸಲಕರೆಗಳು , ಮಿನಿ ಹಿಟಾಚಿಯು ಬಂದಿದ್ದು, ಆದರೆ ಇಂದು ಕೂಡ ಯಾವುದೇ ಅಸ್ತಿಪಂಜರ ದೊರೆತಿಲ್ಲ.
ಮೊದಲ ಹಂತದಲ್ಲಿ ಸ್ಥಳೀಯ 12 ಪೌರ ಕಾರ್ಮಿಕರ ಸಹಕಾರದಲ್ಲಿ ಅಗೆಯುವ ಕಾರ್ಯ ಆರಂಭ ವಾಯಿತು. ಸುಮಾರು 3 ಗಂಟೆ ಅಗೆದು ಸುಮಾರು 4 ಡಿ ಆಳ, 6 ಅಡಿ ಉದ್ದದ ಹೊಮಡ ತೋಡಿದರೂ ಯಾವುದೇ ಕುರುಹು ಸಿಗಲಿಲ್ಲ. ಕಾರ್ಯಾಚರಣೆಯ ಸ್ಥಳ ನದಿ ಸಮೀಪವಾದ್ದರಿಂದ ನೀರಿನ ಒರತೆ, ಮೇಲೆ ಬೀಳುತ್ತಿದ್ದ ಕಲ್ಲು, ಮಣ್ಣು ಅಡ್ಡಿಯಾಯಿತು. ಮಂಗಳವಾರ ನೇತ್ರಾವತಿ ಸ್ನಾನಘಟ್ಟದ ಬಳಿ ಪುತ್ತೂರು ಎಸಿ ಸಮ್ಮುಖದಲ್ಲಿ 6 ತಾಸಿಗೂ ಹೆಚ್ಚು ಕಾಲ ಅಗೆಯುವ ಕಾರ್ಯ ಮಾಡಲಾಗಿತ್ತು.
ಈ ಪ್ರಕ್ರಿಯೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಇಬ್ಬರು ನುರಿತ ವೈದ್ಯರೂ ಸಹ ಆಗಮಿಸಿದ್ದರು. ಡಿಐಜಿ ಅನುಚೇತ್, ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸ್ಪಿ ಸೈಮನ್, ಪುತ್ತೂರು ಎಸಿ ಸ್ಟ್ರೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಕಂದಾಯ, ಅರಣ್ಯ, ಎಫ್‌ಎಸ್‌ಎಲ್ ಸೋಕೋ ವಿಭಾಗ, ಆಂತರಿಕ ಭದ್ರತಾ ದಳ , ಪೊಲೀಸ್ ತಂಡ ನಿನ್ನೆ 12 ಗಂಟೆಗೆ ಕಾರ್ಯಾಚರಣೆ ಆರಂಭಿಸಿತ್ತು.