ದಾವಣಗೆರೆ : ದಾವಣಗೆರೆಯಲ್ಲಿ ಹಾಡ ಹಗಲೇ ಕೋರ್ಟ್ ಆವರಣದಲ್ಲೆ ಪತ್ನಿಗೆ ಚಾಕುವಿನಿಂದ ಇರಿದು ಪತಿ, ಕೊಲೆಗೆ ಯತ್ನಿಸಿರುವ ಘಟನೆ ದಾವಣಗೆರೆ ನಗರದ ಕೌಟುಂಬಿಕ ನ್ಯಾಯಾಲಯ ಆವರಣದಲ್ಲಿ ಈ ಒಂದು ಘಟನೆ ನಡೆದಿದೆ. ಪತ್ನಿಗೆ ಚಾಕು ಇರಿದ ಬಳಿಕ ಪತಿ ತಾನು ಸಹ ಕೈ ಕೊಯ್ದುಕೊಂಡಿದ್ದಾನೆ. ಪತ್ನಿ ಪವಿತ್ರ ಮೇಲೆ ಪತಿ ಪ್ರವೀಣ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಸದ್ಯ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಪತಿ ಪ್ರವೀಣ್ ಹಾಗೂ ಪತ್ನಿ ಪವಿತ್ರಾಗೆ ಇಬ್ಬರಿಗೂ ನೀಡಲಾಗುತ್ತಿದೆ. ದಾವಣಗೆರೆಯ ಜಾಲಿ ನಗರದ ನಿವಾಸಿಯಾಗಿರುವ ಪ್ರವೀಣ್ ಬೆಂಗಳೂರು ಮೂಲದ ಪವಿತ್ರ ಜೊತೆಗೆ ಮದುವೆಯಾಗಿದ್ದ. ಪರಸ್ಪರ ಪ್ರೀತಿಸಿ ಇಬ್ಬರು ಅಂತರ್ಜಾತಿ ವಿವಾಹವಾಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ಪತ್ನಿ ಪತಿಯನ್ನು ತೊರೆದು ಹೋಗಿದ್ದಳು. ಇಂದು ನ್ಯಾಯಾಲಯದಲ್ಲಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಇಬ್ಬರೂ ಬಂದಿದ್ದರು. ಪತ್ನಿಯ ನಡತೆಯ ಮೇಲೆ ಪತಿ ಪ್ರವೀಣ್ ಶಂಕೆ ವ್ಯಕ್ತಪಡಿಸುತ್ತಿದ್ದ.