ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟಿಗೆ ಸುಮಾರು 4500 ಪುಟಗಳಷ್ಟು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಇನ್ನು ಇನ್ನೊಂದೆಡೇ ಪ್ರಕರಣದ ಕುರಿತು ಮಾಹಿತಿ ತಿಳಿಯಲು ನಟ ದರ್ಶನ್ ಅವರು ನಿನ್ನೆ ಜೈಲಾಧಿಕಾರಿಗಳ ಬಳಿ ನನಗೆ ಟಿವಿ ಬೇಕು ಎಂದು ಮನವಿ ಮಾಡಿದ್ದರು. ಈ ನೆಲೆಯಲ್ಲಿ ಇಂದು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಡೆದರ್ಶನಿಗೆ ಟಿವಿ ಮಾಡಲಾಗುತ್ತಿದೆ.
ಹೌದು ನಿನ್ನೆಯಿಂದ ಬಳ್ಳಾರಿ ಸೆಂಟ್ರಲ್ ಜೈಲಿನ 15ನೆ ಸೆಲ್ ನಲ್ಲಿರುವ ನಟ ದರ್ಶನ್ ಟಿವಿ ಬೇಕು ಅಂತ ಹೇಳುತ್ತಿದ್ದರು. ಪದೇ ಪದೇ ಟಿವಿ ಬೇಕು ಅಂತ ದರ್ಶನ ಕೇಳುತ್ತಿದ್ದರು. ಹಾಗಾಗಿ ಇಂದು ಸಂಜೆ 15ನೇ ಸೆಲ್ ನಲ್ಲಿ ಟಿವಿ ವ್ಯವಸ್ಥೆ ಮಾಡಲಾಗುತ್ತಿದೆ.ಜೈಲು ಸಿಬ್ಬಂದಿಗಳು ವಿಚಾರಣಾಧೀನ ಕೈದಿಗಳಿಗೆ ಟಿವಿ ಕೊಡಲು ಅವಕಾಶವಿರುತ್ತದೆ. ಟಿವಿ ಕಡಲು ಏಕೆ ಮೀನಾ ಮೇಷ ಎಣಿಸುತ್ತಿದ್ದೀರಿ ಎಂದು ಆರೋಪಿ ದರ್ಶನ್ ದರ್ಶನ್ ಪ್ರಶ್ನಿಸಿದ್ದ. ಇದೀಗ ಬೇಡಿಕೆ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೆ ಟಿವಿ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.