ಬೆಂಗಳೂರು : ನಟ ದರ್ಶನ್ ತೂಗುದೀಪ ಜಾಮೀನು ಭವಿಷ್ಯ ಸೋಮವಾರ ಕೋರ್ಟ್ ನಿರ್ಧಾರ ಮಾಡಿದೆ. ದರ್ಶನ್ ಅವರ ಜಾರ್ಮಿನು ಅರ್ಜಿ ಸಂಬಂಧ ಬೆಂಗಳೂರಿನ 57 ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಾದ – ಪ್ರತಿವಾದ ನಡೆದ ನ್ಯಾಯಾಧೀಶರು ನಟ ದರ್ಶನ್‌ಗೆ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿ. ವಿ. ನಾಗೇಶ್ ಹಾಗೂ ಪೋಲೀಸರ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದರು.
ಈ ನಡುವೆ ಜಾಮೀನು ಸಿಗದಿರುವ ಕಾರಣಕ್ಕೆ ದರ್ಶನ್ ಪರ ವಕೀಲರು ನಾಳೆ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಬಳ್ಳಾರಿ ಕಾರಾಗೃಹದಲ್ಲಿರುವ ದರ್ಶನ್ ಅವರಿಗೆ ಇದರಿಂದ ಬೇಸರವಾಗಿರುವುದು ಸುಳ್ಳಲ್ಲ. ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಆಗಸ್ಟ್ 29 ರಿಂದ ಬಳ್ಳಾರಿ ಕೇಂದ್ರ ಕಾರಾಗೃಹದ ಹೈಸೆಕ್ಯೂರಿಟಿ ಸೆಲ್‌ನಲ್ಲಿ ಬಂಧನದಲ್ಲಿ ಇಡಲಾಗಿದೆ. ನಾಳೆಯೊಳಗೆ ಜಾಮೀನು ಸಂಬಂಧ ಪ್ರಕ್ರಿಯೆಗಳನ್ನು ದರ್ಶನ್ ಪತ್ನಿ ಮಾಡಲಿದ್ದಾರೆ ಎನ್ನಲಾಗಿದೆ.
ಅದು ಅಲ್ಲದೆ ವಿಚಾರಣೆಯ ವೇಳೆ ಪ್ರಕರಣದ ಮೊದಲ ಆರೋಪಿ ಪವಿತ್ರಗೌಡ ಜಾಮೀನು ಅರ್ಜಿ ಕೂಡ ವಜಾ ಆಗಿದೆ. ಪವಿತ್ರಗೌಡ ಪರ ಟಾಮಿ ಸ್ಟಿಬಾಸ್ಟಿನ್ ಅವರು ವಾದ ಮಂಡನೆ ಮಾಡಿದ್ದರು, ಪವಿತ್ರಗೌಡ ಅವರು ಕೊಲೆಯಲ್ಲಿ ಪಾತ್ರವಹಿಸಿಲ್ಲ ಎನ್ನುವುದನ್ನು ನ್ಯಾಯಾಧೀಶರಿಗೆ ತಿಳಿಸುವುದಕ್ಕೆ ಮುಂದಾದರು ಆದರೆ ಅದು ಯಶಸ್ವಿಯಾಗಿಲ್ಲ. ಹಾಗಾಗಿ ಪವಿತ್ರ ಗೌಡಗೆ ಕೂಡ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.