ಬೆಂಗಳೂರು: ನಟ ಪ್ರಥಮ್ ಗೆ ಕೊಲೆ ಬೆದರಿಕೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಅಭಿಮಾನಿಗಳ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ನಟ ಪ್ರಥಮ್ ದೂರು ಆಧರಿಸಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. BNS u\s 351(2)(3), 352, 126(2) r\w3(5) ರಡಿ ಪ್ರಕರಣ ದಾಖಲಾಗಿದೆ. A1 ಬೇಕರಿ ರಘು, A2 ಯಶಸ್ವಿನಿ ಮತ್ತು ಇತರರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ನಡುವೆ ನಟ ಪ್ರಥಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ನಟ ಪ್ರಥಮ್ ಅವರು, ಅಲ್ರಪ್ಪ ಚುಚ್ಚೋಕೆ ಅಂತ ಬಂದವರನ್ನ 5 ದಿನ case ಹಾಕದೇ ಸುಮ್ನಿದ್ದೆ..! ದರ್ಶನ್ ಸರ್ solve ಮಾಡಿಸ್ತಾರೆ ಸುಮ್ನೆ ಕೇಸ್ ಬೇಡ ಅಂತ..!ಅವ್ರ ಕಡೆಯಿಂದಲೇ ಕೇಸ್ ಹಾಕಿ ಅಂತ ಹೇಳಿದ್ದು. ಹಂಗೆ ಹೇಳಿ ಸಂಜೆ ನೋಡಿದ್ರೆ 2000 pages ಲಿ ಕುಡಿದು ಗಲಾಟೆ ಪ್ರಥಮ್ ಇಂದಲೇ ತಪ್ಪಾಗಿದ್ದು ಅಂದ್ರೆ ನನ್ನ family life ,personal life ಹಾಳಾಗೋದಿಲ್ವಾ?
ದರ್ಶನ್ ಅವ್ರ related case ಬರಲೇಬಾರ್ದು ಅಂತ ಸುಮ್ಮನಿದ್ರೆ ನಂಬಿಸಿ ಮೋಸ ಮಾಡಿದ್ದು ತಪ್ಪಲ್ವಾ? ನನಗೆ ಚುಚ್ಚೋಕೆ ಬಂದಿದ್ದಕೆ ಅಲ್ವೇಲ್ರಪ್ಪ ಇಷ್ಟು ಕೋಪದಲ್ಲಿ ಮಾತಾಡ್ತಾ ಇರೋದು? ಅಂದ್ರೆ ಸಾಯಿಸಿದ್ರೂ ಸುಮ್ಮನಿರಬೇಕಾ?7 days ಇಂದ ನಮ್ಮ ಕುಟುಂಬಕ್ಕೆ ವಿಷಯ ಗೊತ್ತಾಗದಂತೆ ಮೇಟೆಂನ್ ಮಾಡಿದ್ದೆ.
ಚುಚ್ಚೋಕೆ ಬಂದ ವಿಷ್ಯ TV ಲಿ ನೋಡಿ ಗಾಬರಿ ಆಗಿದ್ದಾರೆ. ಅಧಿಕೃತ ದರ್ಶನ್ ಅವ್ರ fans page Social media ಕುಡಿದು ಗಲಾಟೆ ಪ್ರಥಮ್ ಮಾಡಿದ್ದು ಅನ್ನೋದನ್ನ ನೋಡಿ ನಾನು ಶಾಕಾದೆ. ದರ್ಶನ್ ಅವ್ರಿಗೆ ಒಳ್ಳೇದು ಮಾಡೋಕೆ ಹೋಗಿದ್ದಕ್ಕೆ ಬೆನ್ನಿಗೆ ಚೂರಿ ಹಾಕಿಬಿಟ್ರು…ಆಗಲೂ ಕೋಪ ಮಾಡ್ಕೊಬಾರ್ದಾ? ನಮ್ಮದು ಜೀವ ಅಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.