ಹಾವೇರಿ : ರಾಜ್ಯಾದ್ಯಂತ ಡೆವಿಲ್ ಸಿನೆಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದೂ, ಇದರ ಮಧ್ಯ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ನೆಕ್ಸ್ಟ್ ಸಿಎಂ ದರ್ಶನ್ ಎಂದು ಪೋಸ್ಟ್ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ಇದೀಗ ಜನವರಿಯಲ್ಲಿ ದರ್ಶನ್ ಅಣ್ಣನಿಗೆ ಜಾಮೀನು ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಸಿಗದಿದ್ರೆ ನಾನೇ ಖುದ್ದು ಜೈಲಿಗೆ ಹೋಗಿ ಆಶೀರ್ವಾದ ಪಡೆದು ಬರ್ತೀನಿ ಎಂದು ನಟ ಹಾಗೂ ಸಚಿವ ಜಮೀರ್ ಪುತ್ರ ಝೈದ್ ಖಾನ್ ಹೇಳಿದ್ದಾರೆ.
ಹಾವೇರಿಯಲ್ಲಿ ಕಲ್ಟ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋವಿನಲ್ಲೂ ದರ್ಶನ್ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಟ್ಟಿದ್ದಾರೆ. ʻದರ್ಶನʼ ಎಂಬ ಹೆಸರಿನಿಂದ ಸಿನಿಮಾ ಸಕ್ಸಸ್ ಆಗೇ ಆಗುತ್ತದೆ. ಇವೆರಡನ್ನ ನಾನು ಡೆವಿಲ್ ನೋಡಿ ಕಲಿತುಕೊಂಡೆ. ಸಿನಿಮಾ ತುಂಬಾ ಚೆನ್ನಾಗಿ ಇದೆ. ದರ್ಶನ್ ಅಣ್ಣನಿಗೆ ಜನವರಿಯಲ್ಲಿ ಬೇಲ್ ಸಿಗುವ ನಿರೀಕ್ಷೆಯಿದೆ ಎಂದರು.








