ಬೆಂಗಳೂರು : ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣದ A16 ಆರೋಪಿಯಾಗಿರುವ ಕೇಶವಮೂರ್ತಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ವಿಚಾರಣೆಯ ವೇಳೆ ಕೇಶವಮೂರ್ತಿ ಅವರ ಪರ ವಕೀಲರಾದ ರಂಗನಾಥ್ ರೆಡ್ಡಿ ವಾದ ಮಂಡಿಸಿ, ಕೇವಲ ಕೊಲೆಯ ನಂತರದ ಸಾಕ್ಷಿಯ ನಾಶದ ಆರೋಪ ಮಾತ್ರವಿತ್ತು. ಈ ಜಾಮೀನು ಇತರೆ ಆರೋಪಿಗಳ ಮೇಲಿನ ಕೇಸಿಗೆ ಸಂಬಂಧಿಸಿದಲ್ಲ. ಹಾಗಾಗಿ ಈ ಒಂದು ಕಾರಣಕ್ಕೆ ಜಾಮೀನು ಮಂಜೂರು ಮಾಡಿದೆ. ವಿಚಾರಣೆ ವೇಳೆ ನ್ಯಾಯಾಧೀಶರಾದ ಎಸ್ ವಿಶ್ವಜೀತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.
ಕೇಶವಮೂರ್ತಿ ವಿರುದ್ಧ ಕೊಲೆ ಆರೋಪ ಇರಲಿಲ್ಲ ಕೇವಲ ಕೊಲೆಯ ನಂತರದ ಸಾಕ್ಷ ನಾಶದ ಆರೋಪ ಮಾತ್ರವಿತ್ತು. ಆರೋಪಿ ವಿರುದ್ಧದ ಜಾಮೀನು ನೀಡಬಹುದಾದ ಅಪರಾಧಗಳಿವೆ ಆರೋಪ ಪಟ್ಟಿಯಲ್ಲಿ ಈತನ ಮೇಲೆ ಕೊಲೆ ಆರೋಪವಿಲ್ಲವೆಂದು ಕೇಶವಮೂರ್ತಿ ಪರ ವಕೀಲ ರಂಗನಾಥ ರೆಡ್ಡಿ ವಾದಿಸಿದರು.
ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಿದ ದಿನದಿಂದಲೂ ಕೂಡ ಪ್ರಕರಣದ A16ನೇ ಆರೋಪಿಯಾಗಿರುವ ಕೇಶವಮೂರ್ತಿ ಸುಮಾರು ನೂರಕ್ಕೂ ಹೆಚ್ಚು ದಿನಗಳ ಕಾಲ ಜೈಲಲ್ಲಿ ಇದ್ದರು. ಬಳಿಕ ಅವರನ್ನು ತುಮಕೂರು ಜೈಲಿಗೆ ಶಫ್ಟ್ ಮಾಡಲಾಯಿತು. ಇದೀಗ ಪ್ರಕರಣದ A 16 ಆರೋಪಿ ಆಗಿರುವ ಕೇಶವಮೂರ್ತಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.