ಮೈಸೂರು : ಮೈಸೂರು ಜಿಲ್ಲೆಯ ವರುಣಾ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರ ಅಷ್ಟೆ ಅಲ್ಲದೆ ಅವರು ಹುಟ್ಟಿದ ಊರಿನಲ್ಲಿ ಇಂದಿಗೂ ಸಾಮಾಜಿಕ ಪಿಡುಗು ಚಾಲ್ತಿಯಲ್ಲಿರುವುದು ದುರಾದೃಷ್ಟಕರ. ಹೌದು ಯಜಮಾನರ ಮಾತು ಕೇಳದಿದ್ದಕ್ಕೆ ಕುಟುಂಬ ಒಂದಕ್ಕೆ ಬಹಿಷ್ಕಾರ ಹಾಕಲಾಗಿದ್ದು, ಸಿದ್ದರಾಮನಹುಂಡಿ ಗ್ರಾಮ ಸಮೀಪದ ಶ್ರೀನಿವಾಸಪುರದಲ್ಲಿ ಈ ಒಂದು ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸಪುರದಲ್ಲಿ ಈ ಒಂದು ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀನಿವಾಸಪುರ ಗ್ರಾಮದ ಯಜಮಾನರಿಂದ ದಲಿತ ಸಮುದಾಯದ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ನಾಲ್ಕು ವರ್ಷದಿಂದ ಗ್ರಾಮದ ಸುರೇಶ್ ಕುಟುಂಬಕ್ಕೆ ಯಜಮಾನರಾದ ಚಿಕ್ಕಣ್ಣಯ್ಯ, ಬಸವಯ್ಯ, ಮೋಟಮಹದೇವಯ್ಯ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಹದೇವು, ಬೊಮ್ಮಾಯಿ ಇಂದ ಬಹಿಷ್ಕಾರ ಹಾಕಲಾಗಿದೆ.
4 ವರ್ಷದ ಹಿಂದೆ ನಡೆದಿದ್ದ ಗಲಾಟೆ ಸಂಬಂಧ ನ್ಯಾಯ ಪಂಚಾಯಿತಿ ಆಗಿತ್ತು. ರಂಗನಾಥಪುರದ ಪ್ರಮೋದ್ ಹಾಗೂ ಸುರೇಶ್ ನಡುವೆ ಗಲಾಟೆ ನಡೆದಿತ್ತು. ಸುರೇಶ್ ಮನೆಗೆ ನುಗ್ಗಿ ವಸ್ತುಗಳನ್ನು ಪ್ರಮೋದ್ ಕಡೆಯವರು ಹಾಳು ಮಾಡಿದ್ದರು. ಇದರ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಇಬ್ಬರಿಗೂ ಕೂಡ ದಂಡ ಹಾಕಲಾಗಿತ್ತು. ಪ್ರಮೋದ್ ಗೆ ರೂ.25,000 ಹಾಗೂ ಸುರೇಶ್ ಗೆ 15,000 ದಡ್ಡ ಹಾಕಿದ್ದರು.ಆದರೆ ಈ ವೇಳೆ ನಮಗೆ ಅನ್ಯಾಯ ಆಗಿರುವ ಕಾರಣಕ್ಕೆ ದಂಡ ಕಟ್ಟಲ್ಲ ಎಂದು ಸುರೇಶ ಹೇಳಿದ್ದರು.
ತಮ್ಮ ಮಾತು ಕೇಳದಿದ್ದಕ್ಕೆ ಗ್ರಾಮದ ಯಜಮಾನರು ಕೋಪಗೊಂಡಿದ್ದರು. ಪಂಚಾಯತಿಯಲ್ಲಿ ಮುಜುಗರ ಆಗಿದೆ ಎಂದು ಸುರೇಶ್ ಮೇಲೆ ಯಜಮಾನರು ಕೋಪಗೊಂಡು ತಪ್ಪು ಕಾಣಿಕೆ ಕಟ್ಟುವವರೆಗೂ ತಮ್ಮ ಕುಲಕ್ಕೆ ಸೇರಿಸಲ್ಲ ಎಂದು ಬಹಿಷ್ಕಾರ ಹಾಕಿದ್ದಾರೆ. ಡಿಸಿ, ಪೊಲೀಸರು, ತಶಿಲ್ದಾರ್ ಗೆ ದೂರು ಕೊಟ್ಟರು ಕೂಡ ಸುರೇಶಗೆ ನ್ಯಾಯ ಸಿಕ್ಕಿಲ್ಲ ಎಂಎಲ್ಸಿ ಯತೀಂದ್ರಗೂ ಮನವಿ ಮಾಡಿದರು ಕೂಡ ಸಮಸ್ಯೆ ಬಗೆಹರಿದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಹಬ್ಬ ಸಾವು ನೋವು ಆಚರಣೆಗಳ ವಿಚಾರದಲ್ಲೂ ಕೂಡ ಕುಟುಂಬ ಹೊರಗೆ ಇದೆ ಸುರೇಶ್ ತಾಯಿ ಮಾದೇವಮ್ಮ ಇಬ್ಬರನ್ನು ಕೂಡ ಗ್ರಾಮಸ್ಥರು ಹೊರಗಿಟ್ಟಿದ್ದಾರೆ. ಪತಿ ಹಾಗೂ ಮಗ ತೀರಿಕೊಂಡಾಗಲೂ ಗ್ರಾಮಸ್ಥರು ಸಹಾಯಕ್ಕೆ ಬಂದಿಲ್ಲ. ಕುಟುಂಬದ ಜೊತೆಗೆ ಯಾರೇ ಸಂಪರ್ಕಕ್ಕೆ ಬಂದರೂ ಕೂಡ 5000 ದಂಡ ವಿಧಿಸುತ್ತಾರೆ. ಸುರೇಶ್ ಕುಟುಂಬದ ಸಂಪರ್ಕದಲ್ಲಿದ್ದರೆ 5,000 ದಂಡ ಹಾಕುವ ಎಚ್ಚರಿಕೆ ನೀಡಲಾಗಿದೆ. ಗ್ರಾಮದ ಯಜಮಾನರ ನಡೆಯಿಂದ ಈ ಸದ್ಯ ಸುರೇಶ್ ಕುಟುಂಬ ಕಂಗಾಲಾಗಿದೆ.