ಬೆಂಗಳೂರು : ಬಿಜೆಪಿ ಎಂಎಲ್ಸಿ ಆಗಿರುವಂತಹ ಎನ್ ರವಿಕುಮಾರ್ ಅವರು ಇತ್ತೀಚಿಗೆ ಸರ್ಕಾರಿ ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ ಇತ್ತೀಚೆಗೆ ಕಲ್ಬುರ್ಗಿಯ ಜಿಲ್ಲಾಧಿಕಾರಿ ಫೌಜಿಯಾ ತರುನ್ನಂ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸರ್ಕಾರದ ಸಿ.ಎಸ್ ಶಾಲಿನಿ ರಜನಿಶ್ ಅವರ ಕುರಿತು ಅವೆ ಹೇಳಿನ ಕಾರ್ಯ ಹೇಳಿಕೆ ನೀಡಿದ್ದಾರೆ ಈ ಕುರಿತು ಕಾಂಗ್ರೆಸ್ ತೀವ್ರ ಅಕ್ರೋಶ ವ್ಯಕ್ತಪಡಿಸಿದೆ.
ಹೌದು ಸರ್ಕಾರದ ಸಿಎಸ್ ವಿರುದ್ಧ ರವಿಕುಮಾರ್ ಅವಹೇಳನ ಹೇಳಿಕೆ ನೀಡಿದ್ದು, ಸಿಎಸ್ ಶಾಲಿನಿ ರಜನೀಶ್ ಅವರನ್ನು ಎನ್ ರವಿಕುಮಾರ್ ಅವಾಚ್ಯ ಪದ ಬಳಸಿ ಅವಮಾನಿಸಿದ್ದಾರೆ. ಜೂನ್ 30 ರಂದು ಪ್ರತಿಭಟನೆ ವೇಳೆ ಶಾಲಿನಿ ರಜನಿಶ್ ಅವರನ್ನು ನಿಂದಿಸಿದ್ದಾರೆ ಬೆಂಗಳೂರಿನಲ್ಲಿ ಸಿಎಸ್‌ಗೆ ದೂರು ಕೊಡಲು ನಿಯೋಗ ತೆರಳಿತ್ತು. ಈ ವೇಳೆ ಬಿಜೆಪಿ MLC ಎನ್.ರವಿಕುಮಾರ್ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ.
ಈ ಹಿಂದೆ ಕಲ್ಬುರ್ಗಿ ಜಿಲ್ಲಾಧಿಕಾರಿಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ತಿಂಗಳ ಹಿಂದೆ ಅಷ್ಟೇ ಕಲ್ಬುರ್ಗಿ ಜಿಲ್ಲಾಧಿಕಾರಿ ವಿರುದ್ಧವು ರವಿಕುಮಾರ್ ಮಾತನಾಡಿದರು.ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿದ್ದಾರಾ ಎಂದು ಹೇಳಿಕೆ ನೀಡಿದ್ದರು. ಇದೀಗ ಸಿ ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಹಿನೆಲೆಯಲ್ಲಿ ಸಭಾಪತಿಗೆ ರವಿಕುಮಾರ್ ವಿರುದ್ಧ ದೂರು ನೀಡಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮನೋಹರ ನೇತೃತ್ವದ ನಿಯೋಗ ಸಭಾಪತಿಗೆ ದೂರು ನೀಡಿದೆ. ಎಂಎಲ್ಸಿ ಸ್ಥಾನದಿಂದ ರವಿಕುಮಾರ್ ಅವರನ್ನು ವಜಾ ಗೊಳಿಸಿ ರವಿಕುಮಾರ್ ಹೆಣ್ಣು ಮಕ್ಕಳ ಬಗ್ಗೆ ಕೇಳಾಗಿ ಮಾತನಾಡಿದ್ದಾರೆ ಹಿಂದೆ ಜಿಲ್ಲಾಧಿಕಾರಿಗಳ ವಿರುದ್ಧವು ಇದೇ ರೀತಿ ಮಾತನಾಡಿದರು ಎಂದು ದೂರು ನೀಡಿದ್ದಾರೆ.