ಬೆಂಗಳೂರು : ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಮುಖ ಆರೋಪಿಯಾಗಿರುವ ರೇಖಾ ಹಾಗೂ ಆಕೆಯ ಪತಿ ಮಂಜುನಾಥಚಾರಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 1ನೇ ACMM ನ್ಯಾಯಾಲಯ ಆದೇಶ ಹೊರಡಿಸಿದೆ.
ಹೌದು ಉದ್ದನಿಗೆ 25 ಕೋಟಿ ಆಸೆ ತೋರಿಸಿ 5 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಸಿದಂತೆ ಇದೀಗ ರೇಖಾ ಹಾಗೂ ಪತಿ ಮಂಜುನಾಥಚಾರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಈ ಆದೇಶ ಹೊರಡಿಸಿತು. ರೇಖಾ ಮಂಜುನಾಥಚಾರಿ ದಂಪತಿ 14 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ.
ಪ್ರಕರಣ ಹಿನ್ನೆಲೆ?
2023ರಲ್ಲಿ ಉದ್ಯಮಿಗೂ ಮತ್ತು ರೇಖಾಗೂ ಪರಿಚಯವಾಗುತ್ತದೆ. ಕಾರ್ಲ್ಟನ್ ಟವರ್ ಬೆಂಕಿ ದುರಂತದ ಕತೆ ಹೇಳುವ ಮೂಲಕ ಮೋಸದ ಜಾಲ ಬೀಸಿದ ರೇಖಾ, ನಾನು ಟವರ್ ದುರಂತದ ಪ್ರತ್ಯಕ್ಷ ಸಾಕ್ಷಿ, ನಾನು ಸಾಕ್ಷಿ ಹೇಳದಂತೆ ಮಾಲೀಕರು ಆಫರ್ ಮಾಡಿದ್ದಾರೆ. 25 ಕೋಟಿ ರೂ. ಕೊಡುತ್ತೇನೆ ಅಂದಿದ್ದಾರೆ. ನನ್ನ ಖಾತೆಯಲ್ಲಿದ್ದ 6 ಕೋಟಿ ರೂ. ಇದೆ. ಹೀಗಾಗಿ, ಇಡಿ ಮತ್ತು ಐಟಿ ನನ್ನ ಖಾತೆ ಸೀಜ್ ಮಾಡಿವೆ. ಆದರೆ, ಹಣ ರಿಲೀಸ್ ಮಾಡಿಸಲುಕೆ ನನಗೆ ಹಣ ಬೇಕಾಗಿದೆ ಅಂತ ಉದ್ಯಮಿಯನ್ನು ನಂಬಿಸಿ 5.75 ಕೋಟಿ ರೂ. ಪಡೆದಿದ್ದಾಳೆ.
ಮಾಜಿ ಶಾಸಕ ರಾಜೂಗೌಡ ಹೆಸರಿನಲ್ಲೂ ವಂಚನೆ ಮಾಡಿರುವುದು ಪತ್ತೆಯಾಗಿದೆ. 2018ರಲ್ಲಿ ಶಾಸಕರಾಗಿದ್ದ ರಾಜುಗೌಡ ಹೆಸರೇಳಿ ಯಾದಗಿರಿಯಲ್ಲಿ ವಂಚನೆ ಮಾಡಿದ್ದಾಳೆ. ಕೆಲಸ ಕೊಡಿಸುವ ನೆಪದಲ್ಲಿ ಬೆಂಗಳೂರಿನಲ್ಲಿದ್ದ ಸುರಪುರದ ವ್ಯಕ್ತಿಯೊಬ್ಬರಿಗೆ ಪಂಗನಾಮ ಹಾಕಿದ್ದಳು. ಅಂದು ರಾಜುಗೌಡ ದೂರಿನ ಮೇರೆಗೆ ರೇಖಾಳನ್ನ ಅರೆಸ್ಟ್ ಮಾಡಲಾಗಿತ್ತು.
ಆರೋಪಿ ರೇಖಾಳ ಬ್ಯಾಂಕ್ ಖಾತೆಯಿಂದ 24 ಕೋಟಿ ರೂ. ವ್ಯವಹಾರ ಆಗಿದೆ. ಆರೋಪಿ ಮಹಿಳೆಯ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಆಕೆ ವಿರುದ್ಧ 5 ವಂಚನೆ ಕೇಸ್, ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಆಕೆಯ ಪತಿ ಮತ್ತು ಮತ್ತೊಬ್ಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಸದ್ಯ ಇಬ್ಬರು 14 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.