ಚೈನೈ : ಗುಜರಾತ್ನ ಅಹಮದಾಬಾದ್ ವಿಮಾನ ದುರಂತ ಘಟನೆ ಎಲ್ಲಿ 270ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಅದಾದ ಬಳಿಕ, ಇದೀಗ ಇಂಡಿಗೋ ವಿಮಾನದ ವಿಮಾನದ ವಿಂಡ್ ಶೀಲ್ಡ್ ನಲ್ಲಿ ಬಿರುಕು ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ. ಮಧುರೈನಿಂದ ಚೈನ್ನೈ ತೆರುಳುತ್ತಿದ್ದ ವಿಮಾನದ ವಿಂಡ್ ಶೀಲ್ಡ್ ನಲ್ಲಿ ಕಾಣಿಸಿಕೊಂಡಿದೆ.
ಆದರೆ ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ಇದಿಗ ತಪ್ಪಿದೆ. ವಿಮಾನದ ವಿಂಡ್ ಶೀಲ್ಡ್ ನಲ್ಲಿ ಬಿರುಕು ಕಂಡ ಕೂಡಲೇ ಪೈಲೆಟ್ ಮಾಹಿತಿ ನೀಡಿದ್ದಾರೆ ಚೈನ್ನೈ ಏರ್ಪೋರ್ಟ್ ನಲ್ಲಿ ಸುರಕ್ಷಿತವಾಗಿ ಇದೀಗ ವಿಮಾನ ಲ್ಯಾಂಡ್ ಆಗಿದೆ. ಸುಮಾರು 76 ಪ್ರಯಾಣಿಕರನ್ನು ಇಂಡಿಗೋ ವಿಮಾನ ಕರೆ ತಂದಿತ್ತು.