ಉತ್ತರಕನ್ನಡ : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುಷ್ಕರ್ಮಿ ಒಬ್ಬ ಹಸುವಿನ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಬಳಿಕ ಮೈಸೂರಲ್ಲಿ ದೇವರಿಗೆ ಬಿಟ್ಟ ಕರುವಿನ ಬಾಲ ಕೊಯ್ದ ಎರಡನೇ ಘಟನೆ ನಡೆಯಿತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಎಂಬಲ್ಲಿ ರಾಕ್ಷಸರು ಗರ್ಭ ಧರಿಸಿದ್ದ ಹಸುವಿನ ಕುತ್ತಿಗೆ ಬೇರ್ಪಡಿಸಿ ದೇಹ ಮಾತ್ರ ಹೊತ್ತೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಇಂತಹ ಕೃತ್ಯಗಳಿಗೆ ಹೇಡಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರೇ ಕಾರಣ ಎಂದು ಕಿಡಿ ಕಾರಿದ್ದಾರೆ.
ಇಂದು ಘಟನಾ ಸ್ಥಳಕ್ಕೆ ದಿನಕರ ಶೆಟ್ಟಿ ಭೇಟಿ ನೀಡಿದ್ದು, ಸರ್ಕಾರದವರು ಶೆಟ್ಟಿ ಕೆಂಡಾಮಂಡಲವಾಗಿದ್ದಾರೆ. ಮೊನ್ನೆ ಹಸುವಿನ ಕೆಚ್ಚಲು ಕತ್ತರಿಸಿದಾಗ ಆರೋಪಿ ಮಾನಸಿಕ ಅಸ್ವಸ್ಥ ಹೇಳಿಕೆ ನೀಡಿದರು. ಮಾನಸಿಕ ಅಸ್ವಸ್ಥ ಆತ ಅಲ್ಲ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು. ಸಿಎಂ ಗೃಹ ಸಚಿವರು ಆಸ್ಪತ್ರೆಯಲ್ಲಿ ತಮ್ಮ ಮಾನಸಿಕ ಸ್ಥಿತಿ ಚೆಕ್ ಮಾಡಿಸಲಿ. ಇಂತಹ ಕೃತ್ಯ ರಾಜ್ಯದಲ್ಲಿ ಆಗಲು ಹೇಡಿ ಸಿಎಂ ಹೇಡಿ ಗೃಹ ಸಚಿವರೆ ಕಾರಣ ಎಂದು ಆಕ್ರೋಶ ಹೊರಹಾಕಿದರು.
ಇಂತಹ ಕೃತ್ಯ ನಡೆದಾಗ ನಿಮ್ಮಿಂದ ನಾವು ಪರಿಹಾರದ ಹಣ ಬಯಸುವುದಿಲ್ಲ.ಯಾರೇ ಪರಿಹಾರ ಕೊಟ್ಟರು ಸ್ವೀಕರಿಸಿದಂತೆ ಗೋಮಾಲೀಕರಿಗೆ ಹೇಳಿದ್ದೇನೆ. ಪರಿಹಾರ ಕೊಡುವ ಅಗತ್ಯವಿಲ್ಲ ರಾಜ್ಯದಲ್ಲಿ ಗೋವುಗಳಿಗೆ ರಕ್ಷಣೆ ಕೊಡಿ ನಾವೆಲ್ಲರೂ ಒಟ್ಟಾಗಿ ಹಸುವಿನ ಮಾಲೀಕರಿಗೆ ಪರಿಹಾರ ಕೊಡುತ್ತೇವೆ. ಕಳ್ಳರಿಗೆ ಪೊಲೀಸರ ಭಯವಿಲ್ಲ ಭಯವಿದ್ದರೆ ಇಂತಹ ಕೃತ್ಯ ಆಗಲ್ಲ. ಪೊಲೀಸರ ಸಹಕಾರದಿಂದಲೇ ಕಳ್ಳರು ಇಂತಹ ಕೃತ್ಯ ಮಾಡುತ್ತಿದ್ದಾರೆ. ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ಕಳ್ಳರಿಗೆ ಭಯ ಹುಟ್ಟಿಸಲಿ ಎಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಹೇಳಿಕೆ ನೀಡಿದರು.