ಬೆಂಗಳೂರು : ಕೊರೋನ ಹಗರಣದ ಮತ್ತೊಂದು ಸ್ಪೋಟಕ ವರದಿ ಬಹಿರಂಗವಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ನ್ಯಾ.ಕುನ್ಹ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಇಬ್ಬರ ವಿರುದ್ಧ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಹೌದು ಬಿಎಸ್ ಯಡಿಯೂರಪ್ಪ ಹಾಗೂ ಶ್ರೀರಾಮುಲು ಕಾರ್ಯವೈಖರಿಗೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಕೊರೊನ ವೇಳೆ ಖಾಸಗಿ ಲ್ಯಾಬ್ ಗಳಿಗೆ 6.93 ಕೋಟಿ ಹಣ ಸಂದಾಯವಾಗಿದೆ. ಆದರೆ ಖಾಸಗಿ ಲ್ಯಾಬ್ ಗಳು ICMR ನಿಂದ ಮಾನ್ಯತೆ ಪಡೆದಿಲ್ಲ. ಅಧಿಕೃತ ICMR ಲ್ಯಾಬ್ ಗಳು ಅಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. RTPCR ಟೆಸ್ಟಿಗೆ ಲ್ಯಾಬ್ ಗಳ ಸಾಮರ್ಥ್ಯ ಕ್ಷಮತೆ ಗುರುತಿಸಿಲ್ಲ.
ಸಾಮರ್ಥ್ಯ ಹಾಗೂ ಕ್ಷಮತೆ ಪರಿಶೀಲಿಸದೆ ಖಾಸಗಿ ಲ್ಯಾಬ್ ಗೆ ಅನುಮತಿ ನೀಡಲಾಗಿದೆ. 6 ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅನಧಿಕೃತವಾಗಿ ಲ್ಯಾಬ್ ಗಳಿಗೆ ಹಣ ಸಂದಾಯದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. 8 ಲ್ಯಾಬ್ ಗಳಿಗೆ ಅನುಮತಿ ಪಡೆಯದೆ 4.28 ಕೋಟಿ ರೂಪಾಯಿ ಸಂದಾಯವಾಗಿದೆ. ಮಾನ್ಯತೆ ಪಡೆದ ಲ್ಯಾಬ್ಗಳಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಲ್ಯಾಬ್ ಎಂದು ಗುರುತಿಸಿಲ್ಲ.