ರಾಮನಗರ : ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ಕಲಹ ನಡೆದಿದ್ದು, ದೊಡ್ಡಪ್ಪನ ಮಗನ ಮೇಲೆ ಚಿಕ್ಕಪ್ಪನ ಮಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಏಳಗಳ್ಳಿ ಗ್ರಾಮದಲ್ಲಿ ಈ ಒಂದು ಗಲಾಟೆ ನಡೆದಿದೆ.
ಚಿಕ್ಕಪ್ಪನ ಮಗ ರಘುನಿಂದ ಲೋಕೇಶ್ ಮೇಲೆ ಹಲ್ಲೆ ನಡೆದಿದೆ. ಲೋಕೇಶ್ ರೇಷ್ಮೆ ಸೊಪ್ಪು ತರುವಾಗ ಮನೆಯ ಬಳಿ ಮಾರಕಾಸ್ತ್ರಗಳಿಂದ ರಾಘು ದಾಳಿ ಮಾಡಿದ್ದಾನೆ ತಕ್ಷಣ ದಯಾನಂದ ಸಾಗರ್ ಆಸ್ಪತ್ರೆಗೆ ಗಾಯಾಳು ಲೋಕೇಶ್ ದಾಖಲಾಗಿದ್ದಾನೆ. ಘಟನೆಯ ನಂತರ ಆರೋಪಿ ರಘು ಪರಾರಿ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಾಗಿ ಬಲೆ ಬೀಸಿದ್ದಾರೆ.