ಬೆಂಗಳೂರು : ಕೋರ್ಟ್ ನಿಂದ ವಾರಂಟ್ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರನ್ನ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ, ಬೆಂಗಳೂರು 42ನೇ ಎಸಿಜಿಎಂ ನ್ಯಾಯಾಲಯದಿಂದ ವಾರಂಟ್ ಹೊರಡಿಸಲಾಗಿತ್ತು.
2021 ರಲ್ಲಿ ವಾಟಾಳ್ ನಾಗರಾಜ್ ಶಾಸಕ ಸುರೇಶ್ ಕುಮಾರ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಪ್ರಕರಣ ಸಂಬಂಧ ಬೆಂಗಳೂರಿನ 42ನೇ ಎಸಿಜಿಎಂ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಬಸವೇಶ್ವರನಗರ ಠಾಣೆ ಪೋಲಿಸರು ವಾಟಾಳ್ ನಾಗರಾಜ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ವಾರಂಟ್ ಕೊಟ್ರೆ ಮಾತ್ರ ಬನ್ನಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸ್ ವಾಹನ ಹತ್ತಲು ನಾಗರಾಜ್ ನಿರಾಕರಣೆ ಮಾಡಿದರು. ಕೊನೆಗೆ ಆಟೋ ರಿಕ್ಷಾದಲ್ಲಿ ಪೊಲೀಸರು ಕೋರ್ಟಿಗೆ ಕರೆದೋಯ್ದಿದ್ದಾರೆ.








