ಮೈಸೂರು : ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಚಾಮೆಗೌಡನ ಹುಂಡಿ ಎಂಬ ಗ್ರಾಮದಲ್ಲಿ ಕಳೆದ 2021 ಏಪ್ರಿಲ್ 28ರಂದು ವ್ಯಕ್ತಿ ಒಬ್ಬ ತನ್ನ ತುಂಬು ಗರ್ಭಿಣಿ ಹೆಂಡತಿ ಸೇರಿದಂತೆ ಐವರನ್ನು ಭೀಕರವಾಗಿ ಕೊಲೆ ಮಾಡಿದ್ದ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೈಸೂರು ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿ ಮಣಿಕಂಠಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಹೌದು ಕೊಲೆ ಅಪರಾಧಿ ಮಣಿಕಂಠಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಇದೀಗ ತೀರ್ಪು ನೀಡಿದೆ. ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳರವರ ತೀರ್ಪು ನೀಡಿದ್ದಾರೆ. ಮಣಿಕಂಠ ಸ್ವಾಮಿ (35) ಎನ್ನುವ ಅಪರಾಧಿಗೆ ಮರಣ ದಂಡನೆ ಹಾಗೂ 10,000 ದಂಡ ವಿಧಿಸಿ ತೀರ್ಪು ಹೊರಡಿಸಿದ್ದಾರೆ. ತುಂಬು ಗರ್ಭಿಣಿ ಪತ್ನಿ ಸೇರಿದಂತೆ ಮಣಿಕಂಠ ಐವರನ್ನು ಕೊಲೆ ಮಾಡಿದ್ದ.
ಗರ್ಭಿಣಿಯಾಗಿದ್ದ ಪತ್ನಿ ಗಂಗೆ, ತಾಯಿ ಕೆಂಪಂಜ್ಜಮ್ಮ, ಒಂದೂವರೆ ವರ್ಷದ ರೋಹಿತ್ ಹಾಗೂ 4 ವರ್ಷದ ಸಾಮ್ರಾಟನನ್ನು ಮಣಿಕಂಠ ಕೊಲೆ ಮಾಡಿದ್ದ. ಹೆಂಡತಿಯ ಬಗ್ಗೆ ಅನುಮಾನ ಪಟ್ಟು ಮಣಿಕಂಠ ಐವರನ್ನು ಕೊಲೆ ಮಾಡಿದ್ದ. 2021 ಎಪ್ರಿಲ್ 28ರಂದು ಚಾಮೇಗೌಡನ ಹುಂಡಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿತ್ತು. ಮೈಸೂರು ಜಿಲ್ಲೆಯ ಎಸ್ ಡಿ ಕೋಟೆ ತಾಲೂಕಿನ ಚಾಮೇಗೌಡನ ಹುಂಡಿ ಗ್ರಾಮದಲ್ಲಿ ಈ ಕೊಲೆ ನಡೆದಿತ್ತು ಸರಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಕುರಿತಂತೆ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಅಭಿಯೋಜಕ ಬಿಇ ಯೋಗೇಶ್ವರ್ ವಾದ ಮಂಡಿಸಿದ್ದರು.