ಬೆಂಗಳೂರು : ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಬಸವೇಶ್ವರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ರಜತ್ ಮತ್ತು ವಿನಯ್ ಗೌಡನನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಅದೇಶಿಸಿದ್ದಾರೆ.
ವಿಚಾರಣೆ ಆರಂಭವಾದಗ ರಜತ್ ಮತ್ತು ವಿನಯ್ ಗೌಡ ಪರವಾಗಿ ವಕೀಲ ಪ್ರಕಾಶ್ ವಾದ ಮಂಡಿಸಿದರು. ಆರೋಪಿಗಳ ವಿರುದ್ಧ ಸುಮೊಟೊ ಕೇಸ್ ದಾಖಲು ಮಾಡಿದ್ದಾರೆ. ರೀಲ್ಸ್ ನಲ್ಲಿ ಮಾರಕಾಸ್ತ್ರ ಹಿಡಿದಿದ್ದಾರೆ ಎಂದು 1 ಕೇಸ್ ದಾಖಲಾಗಿದೆ. ಈ ಸೆಕ್ಷನ್ ನಲ್ಲಿ 3 ವರ್ಷದಿಂದ 7 ವರ್ಷಗಳವರೆಗೆ ಶಿಕ್ಷೆ ಇದೆ. ಇದು ಜಾಮೀನು ನೀಡುವಂತಹ ಪ್ರಕರಣವಾಗಿದೆ ಎಂದು ಆರೋಪಿಗಳಾದ ರಜತ್ ಮತ್ತು ವಿನಯ್ ಗೌಡ ಪರವಾಗಿ ವಕೀಲ ಪ್ರಕಾಶ್ ಅವರು ವಾದ ಮಂಡಿಸಿದರು.
ಬಂಧನಕ್ಕೂ ಮುನ್ನ ಅಕ್ಷಯ್ ಸ್ಟುಡಿಯೋದಲ್ಲಿ ಮಹಜರು ಮಾಡಿದ್ದಾರೆ. ಶೋಗೆ ಬಳಸಲು ಆಯುಧಗಳ ರೀತಿ ಇರುವ ರೀತಿಯ ವಸ್ತುಗಳು ಇವೆ. ಶೋ ಗಳಲ್ಲಿ ಕಬ್ಬಿಣದ ಆಯುಧಗಳನ್ನು ಬಳಸುವುದಿಲ್ಲ. ಕಾಲೇಜುಗಳಲ್ಲೂ ಮತ್ತು ಲಾಂಗ್ ಹಿಡಿದು ಕಾರ್ಯಕ್ರಮ ಮಾಡುತ್ತಾರೆ ಹಾಗಂತ ಅಲ್ಲಿಗೆ ಹೋಗಿ ಕೇಸ್ ದಾಖಲಿಸುತ್ತಾರಾ? ಎಂದು ಆರೋಪಿಗಳ ಪರವಾಗಿ ವಕೀಲ ಪ್ರಕಾಶ್ ವಾದಿಸಿದರು.
ತನಿಖೆಯ ವೇಳೆ ಮೊದಲು ಕಬ್ಬಿಣದ ಲಾಂಗ್ ಅಲ್ಲ ಫೈಬರ್ ಎಂದಿದ್ದರು. ಆದರೆ ಈಗ ಕಬ್ಬಿಣದು ಅಂತ ಅವರೇ ಹೇಳುತ್ತಿದ್ದಾರೆ. ಆ ವಸ್ತು ಹಿಡಿದು ಡ್ಯಾನ್ಸ್ ಮಾಡಿದ್ದಾರೋ ಹೊರತು ಯಾರಿಗೂ ಹೆದರಿಸಿಲ್ಲ. ಹೀಗಿರುವಾಗ ಈ ಸೆಕ್ಷನ್ ಗಳು ಅನ್ವಯ ಆಗುವುದಿಲ್ಲ. ಇವರು ನಟನೆಗೆ ಬಳಸಿದ್ದಾರೆ ಅಷ್ಟೇ, ಇದು ಒಂದು ಕಲೆ. ಇವರಿಗೆ ಹೊಟ್ಟೆ ತುಂಬುತ್ತಿರುವುದೇ ಈ ಒಂದು ಕಲೆಯಿಂದ. ಇದನ್ನು ಮಾಡಬೇಡಿ ಅಂದ್ರೆ RMC ಯಾರ್ಡ್ ನಲ್ಲಿ ಮೂಟೆ ಹೊರಬೇಕಷ್ಟೇ ಎಂದು ವಕೀಲ ಪ್ರಕಾಶ್ ವಾದ ಮಂಡಿಸಿದರು.
ಈ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಎಫ್ಐಆರ್ ಬಗ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಹಿತಿ ನೀಡುತ್ತಿದ್ದಾರೆ. ರಾತ್ರಿ ತಂದು ಫೈಬರ್ ಲಾಂಗ್ ನೀಡಿದಾಗ ನೋಟಿಸ್ ನೀಡಿ ಕಳಿಸಿದ್ದವು. ಬೆಳಿಗ್ಗೆ ಇವರು ಹಾಜರುಪಡಿಸಿದ್ದು ಬೇರೆ ಲಾಂಗ್ ಎಂದು ದೃಢಪಟ್ಟಿದೆ. ಸಾಕ್ಷಾ ನಾಶ ಮಾಡುವ ಉದ್ದೇಶದಿಂದ ಫೈಬರ್ ಲಾಂಗ್ ನೀಡಿದ್ದಾರೆ. ಬೆಳಿಗ್ಗೆ 10.29ಕ್ಕೆ ವಿಚಾರಣೆಗೆ ಕರೆದರೆ ಮಧ್ಯಾಹ್ನ 29ಕ್ಕೆ ಬರುತ್ತಾರೆ. ಆರೋಪಿಗಳು ಇದುವರೆಗೂ ಅಸಲಿ ಲಾಂಗ್ ಅನ್ನು ಹಾಜರುಪಡಿಸಿಲ್ಲ ಎಂದು ಪೊಲೀಸರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದರು.