ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ಸೂಟ್ಕೇಸ್ ನಲ್ಲಿ ಶವವನ್ನ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ರಾಕೇಶ್ ಕಡೇಕರ್ಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಆದೇಶಿಸಲಾಗಿದೆ. ನಿನ್ನೆ ರಾತ್ರಿ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದ ಪೊಲೀಸರು ಇಂದು ಕೋರಮಂಗಲ ಎನ್ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರುಪಡಿಸಿದ್ದರು.
ಹೌದು ಆರೋಪಿಯನ್ನು ಪೊಲೀಸರು ಇಂದು ಜಡ್ಜ್ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಆರೋಪಿ ರಾಕೇಶ್‌ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ನಿನ್ನೆ ರಾತ್ರಿ ಆರೋಪಿಯನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದರು. ಪುಣೆಯಿಂದ ಬೆಂಗಳೂರಿಗೆ ಆರೋಪಿ ರಾಕೇಶನನ್ನು ಪೊಲೀಸರು ಕರೆತಂದಿದ್ದರು. ಸದ್ಯ ರಾಕೇಶ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾನೆ.
ಪ್ರಕರಣ ಹಿನ್ನೆಲೆ?
ಪತ್ನಿಯ ಕೊಲೆ ಮಾಡಿದ ರಾಕೇಶ್, ಶವದ ಕಾಲುಗಳನ್ನ ಮುರಿದು ಶವವನ್ನ ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ. ಅದೇ ಬ್ಯಾಗ್‌ನನ್ನ ಎಳೆಯುವಾಗ ಹ್ಯಾಂಡಲ್ ಕಟ್ ಆಗಿದೆ. ಹೀಗಾಗಿ ಶವವನ್ನ ಅಲ್ಲೇ ಬಿಟ್ಟು ಕಾರ್‌ನಲ್ಲಿ ಎಸ್ಕೇಪ್ ಆಗಿದ್ದ. ಮಾರ್ಚ್ 27ರಂದು ಮಧ್ಯಾಹ್ನ ಗೌರಿ ಅಣ್ಣ ಗಣೇಶ್‌ಗೆ ಕರೆ ಮಾಡಿ, ನಿನ್ನ ತಂಗಿಯನ್ನು ಕೊಂದಿದ್ದೇನೆ, ನಾನು ಸಾಯುತ್ತಿದ್ದೇನೆಂದು ಹೇಳಿದ್ದ.
ಅಷ್ಟೇ ಅಲ್ಲದೆ ತನ್ನ ತಂದೆಗೂ ಕರೆಮಾಡಿದ್ದ. ಅವಳು ನನ್ನ ಜೊತೆ ಜಗಳ ಮಾಡುತ್ತಿದ್ದಳು ಅದಕ್ಕೆ ಕೊಲೆ ಮಾಡಿದೆ. ಯುವತಿಯ ತಾಯಿಗೂ ಹೆಂಡತಿ ಕಾಟ ಕೊಡುತ್ತಿದ್ದಾಳೆ ಎಂದು ಹೇಳಿದ್ದ. ಕೊಲೆ ಮಾಡಿ ಮೊದಲನೇ ದಿನ ಏನು ಹೇಳಿದ್ದಿಲ್ಲ. ಕೊಲೆ ಮಾಡಿ ಎರಡನೇ ದಿನ ತಂದೆಗೆ ಕಾಲ್ಮಾಡಿ ಹತ್ಯೆಯ ವಿಷಯ ತಿಳಿಸಿದ್ದ. ನಂತರ ನಾನು ಸೂಸೈಡ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದ.