ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ A1 ಆರೋಪಿ ಆಗಿರುವಂತಹ ಪವಿತ್ರಾಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಇಂದು ಬೆಂಗಳೂರಿನ ಸಿಟಿ ಸಿವಿಲ್ ಹಾಗೂ ಸೇಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆಗಸ್ಟ್ 31ಕ್ಕೆ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದೆ.
ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಕೇಸ್ ಡೈರಿ ಹಾಗೂ ತನಿಖಾಧಿಕಾರಿಯ ವರದಿಯನ್ನು ನ್ಯಾಯಾಧೀಶರಿಗೆ ಸಲ್ಲಿಸಲಾಗಿದ್ದು, ಮುಚ್ಚಿದ ಲಕೋಟೆಯಲ್ಲಿ ಎಸ್ ಪಿ ಪಿ ಪ್ರಸನ್ನ ಕುಮಾರ್ ಅವರು ವರದಿ ಸಲ್ಲಿಸಿದ್ದಾರೆ. 2024ರ ಫೆಬ್ರವರಿಯಲ್ಲಿ ಪವಿತ್ರ ಗೌಡ ಅಕೌಂಟಿಗೆ ಅಶ್ಲೀಲವಾದಂತಹ ಮೆಸೇಜ್ ಬಂದಿದೆ. ಕೆಲ ತಿಂಗಳು ಬಳಿಕ ಪವಿತ್ರ ಗೌಡ ಪವನ್ ನಂಬರನ್ನು ರೇಣುಕಾ ಸ್ವಾಮಿಗೆ ನೀಡಿದ್ದಾಳೆ.
ಪವಿತ್ರ ಗೌಡ ಎಂದುಕೊಂಡು ರೇಣುಕಾ ಸ್ವಾಮಿ ಈ ವೇಳೆ ಅವನಿಗೆ ಮೆಸೇಜ್ ಮಾಡಿದ್ದಾನೆ. ಪವನ್ ಮೊಬೈಲ್ ನಲ್ಲಿ ರೇಣುಕಾ ಸ್ವಾಮಿ ಜೊತೆ ಪವಿತ್ರ ಗೌಡ ಮಾತನಾಡಿದ್ದಾಳೆ. ರೇಣುಕಾ ಸ್ವಾಮಿಯಿಂದ ಲೊಕೇಶನ್ ಪಡೆದು ಕಿಡ್ನಾಪ್ ಮಾಡಿದ್ದರು. ತೂಗುದೀಪ ಸೇನೆಯ ಸದಸ್ಯನಾಗಿದ್ದ ಆರೋಪಿಯು ಕೂಡ ಈ ಒಂದು ಅಪಹರಣದಲ್ಲಿ ಭಾಗಿಯಾಗಿದ್ದ. A4, 6, 7 ಹಾಗೂ 8 ಮೂಲಕ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದರು.
ಅಪಹರಣ ಮಾಡಿದ ಕಾರಿನ ವಿವರ ಪತ್ತೆಯಾಗಿದೆ.ಅಲ್ಲದೆ ಪಟ್ಟಣಗೆರೆ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದವರ ಹೇಳಿಕೆ ದಾಖಲು ಮಾಡಲಾಗಿದೆ. ಪವಿತ್ರ ಗೌಡ ಪಾತ್ರದ ಬಗ್ಗೆ 164 ಹೇಳಿಕೆ ದಾಖಲಾಗಿದೆ. ಹಲ್ಲೆ ನಡೆಸುವಾಗ ರೇಣುಕಾ ಸ್ವಾಮಿಯ ಶರ್ಟ್ ಕಿತ್ತೊಗೆಯಲಾಗಿದೆ. ರೇಣುಕಾಸ್ವಾಮಿ ಕೈಮುಗಿದು ಅಂಗಲಾಚುತ್ತಿರುವ ಫೋಟೋ ಸೆರೆ ಹಿಡಿಯಲಾಗಿದೆ. ಹಲ್ಲೆ ನಡೆಸಿದ ನಂತರ ಫೋಟೋವನ್ನು ಆರೋಪಿ A3ಗೆ ಕಳುಹಿಸಲಾಗಿದೆ. ಪಟ್ಟಣಗೆರೆ ಶೆಡ್ಗೆ ಕರೆದು ಆಯುಧಗಳಿಂದ ಹಲ್ಲೆ ಮಾಡಲಾಗಿದೆ. ರೇಣುಕಾ ಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲಾಗಿದೆ. ಎಂದು ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ಮಹಿಳೆ ಎಂಬ ಒಂದೇ ಕಾರಣಕ್ಕೆ ಜಾಮೀನು ನೀಡುವಂತಿಲ್ಲ. ಸುಪ್ರೀಂ ಕೋರ್ಟಿನ ತೀರ್ಪು ಉಲ್ಲೇಖಿಸಿ ಎಸ್ ಪಿ ಪಿ ಪ್ರಸನ್ ಕುಮಾರ್ ವಾದ ಮಂಡಿಸಿದರು. ಪವಿತ್ರಗೌಡ ಒಳಸಂಚಿನಲ್ಲಿ ಭಾಗಿಯಾಗಿದ್ದರಿಂದ ರೇಣುಕಾ ಸ್ವಾಮಿ ಕೊಲೆಯಾಗಿದೆ. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಜಾಮೀನು ನೀಡದಂತೆ ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದಿಸಿದರು.
ಜಾಮೀನು ನೀಡಿದರೆ ಸಮಾಜದ ಮೇಲಾಗುವ ಪರಿಣಾಮ ಪರಿಗಣಿಸಬೇಕು. ಇನ್ನು 10 ದಿನದ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಎಲ್ಲರೂ ಸ್ವಾಮಿಯನ್ನು ಹೊಡೆದು ಸಾವೀಕರಣವಾಗಿದ್ದಾರೆ ಹೊಡೆದ ಏಟಿಗೆ ಎದೆಗೂಡಿನ ಮೂಳೆ ಶ್ವಾಸಕೋಶ ಸೇರಿದೆ ಬಿದಿರಿನ ದೊಣ್ಣೆಯಿಂದ ಹೊಡೆದು ಹೊಡೆದು ಸಾಯಿಸಲಾಗಿದೆ. ಮರ್ಮಾಂಗದ ಮೇಲು ಹಲ್ಲೆ ಮಾಡಿ ಹಾನಿಗೊಳಿಸಲಾಗಿದೆ. ಪವಿತ್ರ ಪ್ಯಾಂಟ್ ಮತ್ತು ಚಪ್ಪಲಿಯಲ್ಲಿ ರಕ್ತದ ಡಿಎನ್ಎ ಪತ್ತೆಯಾಗಿದೆ ಎಂದು ವಾದಿಸಿದರು.