ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ಕೋರ್ಟ್ ನಿಂದ ಮತ್ತೊಂದು ರಿಲೀಫ್ ಸಿಕ್ಕಿದ್ದು, ಈ ಹಿಂದೆ ಜುಲೈ 1 ರಿಂದ 25 ರವರೆಗೆ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ ನೀಡಿತ್ತು. ಆದರೆ ದಿನಾಂಕ ಬದಲಾವಣೆ ಮಾಡಿ ಎಂದು ಅರ್ಜಿ ಸಲ್ಲಿಸಿದ್ದ ದರ್ಶನ್, ಇದೀಗ ಕೋರ್ಟ್ ಜುಲೈ 11 ರಿಂದ ಜುಲೈ 30 ರವರೆಗೆ ವಿದೇಶಕ್ಕೆ ತೆರಲು ಅನುಮತಿ ನೀಡಿದೆ.
ಹೌದು ನಟ ದರ್ಶನ್ ವಿದೇಶ ಪ್ರಯಾಣದ ಹೊಸ ದಿನಾಂಕಕ್ಕೆ ಕೋರ್ಟ್ ಅನುಮತಿ ನೀಡಿದೆ. ಜುಲೈ 11 ರಿಂದ 30 ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದ್ದು, ಅವರ ನಟನೆಯ ಡೆವಿಲ್ ಸಿನಿಮಾ ಶೂಟಿಂಗ್ ಗೆ ಯುರೋಪ್, ದುಬೈಗೆ ತೆರಳಲು ಅನುಮತಿ ನೀಡಿದೆ. ಈ ಹಿಂದೆ ಜುಲೈ 1 ರಿಂದ 25 ರವರೆಗೆ ತೆಳುವಂತೆ ಅನುಮತಿಸಿತ್ತು. ದಿನಾಂಕ ಬದಲಾವಣೆ ಮಾಡಿ ಎಂದು ಕೋರಿ ಕೋರ್ಟಿಗೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಜುಲೈ 13 ರಿಂದ 30 ರವರೆಗೆ ದರ್ಶನ್ ವಿದೇಶಿ ಪ್ರಯಾಣಕ್ಕೆ ಕೋರ್ಟ್ ಸೂಚನೆ ನೀಡಿದೆ.