ಬೆಂಗಳೂರು : ಬೆಳಗಾವಿಯ ಸುವರ್ಣಸೌಧದಲ್ಲಿ MLC ಸಿ.ಟಿ ರವಿ ಅವರ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗಾವಿಯ JMFC ಕೋರ್ಟ್ ಈ ಒಂದು ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಡ್ಜ್ ಸಂತೋಷ್ ಗಜಾನನ್ ಭಟ್ ಅವರು ವಿಚಾರಣೆ ನಡೆಸಿ ಬಳಿಕ ಜಾಮೀನು ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿ ಆದೇಶ ಹೊರಡಿಸಿದರು.
ವಿಚಾರಣೆಯ ಆರಂಭದಲ್ಲಿ, ಪೊಲೀಸ್ ಕಸ್ಟಡಿಗೆ ನೀಡಿದ್ದಾರಾ ಇಲ್ಲವಾ ಎನ್ನುವುದು ಸ್ಪಷ್ಟವಾಗಿಲ್ಲ. ಕೋರ್ಟ್ ಆದೇಶದ ಪ್ರತಿ ಇನ್ನೂ ಲಭ್ಯವಾಗಿಲ್ಲ ಎಂದು ವಾದ ಮಂಡಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರ ಹಿರಿಯ ವಕೀಲರವರು ವಾದ ಮಂಡಿಸಿದರು. ದಸ್ತಗಿರಿ ಮಾಡದೆ ಇದ್ದರೆ ಫಿರ್ಯಾದಿ ಬೆಂಬಲಿಗರು ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಮಾಡಬಹುದು ಹೀಗೆ ಎಂದು ಪೊಲೀಸರು ರಿಮಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ ರಿಮಾಂಡ್ ಅರ್ಜಿಯನ್ನು ವಕೀಲರು ಓದುತ್ತಿದ್ದಾರೆ.
ಇನ್ನು ಸಿಟಿ ರವಿ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದು, ಇದು ಕೋರ್ಟ್ ಆದೇಶದ ಯಥಾವತ್ ಜೆರಾಕ್ಸ್ ಪ್ರತಿ ಇದೆ. ಇದೆ ದಾಖಲೆಯನ್ನು ಕೋರ್ಟ್ ಪರಿಗಣಿಸಬಹುದು. ಯಥಾವತ್ ಜೆರಾಕ್ಸ್ ಪ್ರತಿ ಎಂದು ಭರವಸೆ ನೀಡುತ್ತೇವೆ ಎಂದು ಜೆರಾಕ್ಸ್ ಪ್ರತಿಯನ್ನು ಅಶೋಕ್ ಹಾರನಹಳ್ಳಿ ಕೋರ್ಟಿಗೆ ಸಲ್ಲಿಸಿದರು. ಅಶ್ಲೀಲವಾದ ಪದ ಬಳಕೆ ಮಾಡಿದ ಆರೋಪ ಮಾಡಿದ್ದಾರೆ. ಸೆಕ್ಷನ್ 75ಗೆ ಒಂದು ವರ್ಷ ಶಿಕ್ಷೆ 79ಕ್ಕೆ 3 ವರ್ಷದವರೆಗೆ ಶಿಕ್ಷೆ ಇದೆ ಎಂದು ಅಶೋಕ್ ಹಾರನಹಳ್ಳಿ ವಾದಿಸಿದರು.
ಸಾಕಿ ನಾಶ ಮಾಡಬಹುದು ಎಂದು ಹೇಳಿದ್ದಾರೆ. ಸಾಕ್ಷಿಗಳೆಲ್ಲ ಆಡಳಿತ ಪಕ್ಷದವರು ಇದ್ದಾಗ, ನಾಶಪಡಿಸಲು ಹೇಗೆ ಸಾಧ್ಯ? ಅರೆಸ್ಟ್ ನೋಟಿಸ್ ನೀಡಿದ ದಿನವೇ ಸಿಟಿ ರವಿ ಅವರನ್ನು ಬಂಧಿಸಲಾಗಿದೆ ಸಾಕ್ಷಿದಾರರ ಸಹಿ ಅರೆಸ್ಟ್ ಮೆಮೋದಲ್ಲಿ ಇಲ್ಲ. ದೂರು ನೀಡಿದವರ ಸಹಿಯೇ ದೂರಿನಲ್ಲಿ ಇಲ್ಲ. ಸಿಟಿ ರವಿ ಕುಟುಂಬ ಸದಸ್ಯರಿಗೆ ಅರೆಸ್ಟ್ ಮಾಹಿತಿ ನೀಡಿಲ್ಲ. ಬಂಧನಕ್ಕೆ ಕಾರಣಗಳನ್ನು ಅರೆಸ್ಟ್ ಮೆಮೋದಲ್ಲಿ ನೀಡಿಲ್ಲ.
ತನಿಖೆ ನ್ಯಾಯಾಂಗದ ವಿಚಾರಣೆಗೆ ಹಾಜರಾಗದೆ ಪರಾರಿ ಆಗಬಹುದೆಂದು ಕಾರಣ ಕೊಟ್ಟಿದ್ದಾರೆ. ಫಿರ್ಯಾದಿ ಸಚಿವೆ ಅವರಿಗೆ ಬೆದರಿಕೆ ಹಾಕುವುದಕ್ಕೆ ಸಾಧ್ಯನಾ? ಎಫ್ ಐ ಆರ್ ನಲ್ಲೂಫಿರ್ಯಾದಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹಿ ಇಲ್ಲ. ಸೆಕ್ಷನ್ 75 BNS (iv) ಕಾಯ್ದೆಯ ಅಡಿಯಲ್ಲಿ ಕೇಸ್ ಹಾಕಿದ್ದಾರೆ. ಈ ವೇಳೆ ಪೊಲೀಸರು ಆಕ್ಷೇಪಣೆ ಸಲ್ಲಿಸಲಿ ಎಂದು ಜಡ್ಜ್ ತಿಳಿಸಿದರು.
ಈ ಕೇಸ್ ನಲ್ಲಿ ಮಧ್ಯಂತರ ಜಾಮೀನು ನೀಡಬೇಕು ಎಂದು ಸಿಟಿ ರವಿ ಪರ ವಕೀಲ ಅಶೋಕ್ ಹಾರನಹಳ್ಳಿ ವಾದಿಸಿದರು. ಈ ವೇಳೆ ಆರೋಪಿ ಅಸಂವಿಧಾನಿಕ ಪದವನ್ನು ಬಳಸಿದ್ದಾರೆ ಎಂದು ಶ್ಯಾಮ್ ಸುಂದರ ಅವರು ವಾದಿಸಿದರು. ಇದಕ್ಕೆ ಅಶೋಕ ಹಾರನಹಳ್ಳಿ ಪ್ರತಿವಾದ ಮಾಡಿದ್ದು ನಿಮ್ಮ ಲೀಡರ್ ಸಂವಿಧಾನದ ರೆಡ್ ಬುಕ್ ಇಟ್ಟುಕೊಂಡು ಓಡಾಡುತ್ತಾರೆ. ಆದರೆ ಅವರಿಗೆ ಅದರೊಳಗೆ ಏನಿದೆ ಗೊತ್ತಿಲ್ಲ ಪ್ರತಿವಾದಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿಯ JMFC ಕೋರ್ಟ್ ನ ಕಾಪಿ ಬೇಕಲ್ಲ? ಎಂದು ಜಡ್ಜ್ ಪ್ರಶ್ನಿಸಿದಾಗ ಇದು ವ್ಯಕ್ತಿಯ ಸ್ವತಂತ್ರ್ಯದ ಹಕ್ಕಿನ ಪ್ರಶ್ನೆಯಾಗಿದೆ. ದೃಢೀಕೃತ ಪ್ರತಿ ಇಲ್ಲದಿದ್ದರೂ ಕೂಡ ಕೋರ್ಟ್ ಮಧ್ಯಂತರ ಜಾಮೀನು ನೀಡಬಹುದಾಗಿದೆ. ಕೋರ್ಟ್ ಗೆ ಹಾಜರುಪಡಿಸುವವರೆಗೂ ಕಾಯಬೇಕಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕೋರ್ಟ್ ಪರಿಗಣಿಸಬೇಕು ಎಂದು ಅಶೋಕ್ ಹಾರನಹಳ್ಳಿ ಜಡ್ಜ್ ಗೆ ಮನವಿ ಮಾಡಿದರು.
ಕೋರ್ಟ್ ಗೆ ಮಧ್ಯಂತರ ಜಾಮೀನು ನೀಡುವ ಅಧಿಕಾರವಿದೆ. ಸದನದ ಕಲಾಪ ನಡೆಯುವ ಅವಧಿಯಲ್ಲಿ ಈ ಒಂದು ಘಟನೆ ನಡೆದಿದೆ. ಈ ವೇಳೆ ಸಿಟಿ ರವಿ ಪರ ವಕೀಲ ಅಶೋಕ್ ಹಾರನಹಳ್ಳಿ, ಸೀತಾ ಸೋರೆನ್ ಕೇಸ್ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರತಿ ಕೋರ್ಟಿಗೆ ಸಲ್ಲಿಕೆ ಮಾಡಿದರು.
ಸದನದಲ್ಲಿ ಹೇಳಿದ ಮಾತುಗಳನ್ನು ಕೋರ್ಟ್ ನಲ್ಲಿ ಪ್ರಶಿಸುವಂತಿಲ್ಲ. ಸದನದ ವಸ್ತುಗಳನ್ನು ಹಾನಿಪಡಿಸಿದರೆ ಅದನ್ನು ಪ್ರಶ್ನಿಸಬಹುದು. ಸದನದ ಮಾತುಗಳಿಗೆ ಕೇಸ್ ಹಾಕಲು ಅವಕಾಶ ಕೊಟ್ಟರೆ ಸದನದಲ್ಲಿ ಸ್ವತಂತ್ರವಾಗಿ ಮಾತನಾಡುವ ಹಕ್ಕು ಕಳೆದುಕೊಳ್ಳುತ್ತಾರೆ ಒಬ್ಬರಿಗೊಬ್ಬರು ಕೇಸ್ ಹಾಕಿಕೊಳ್ಳುತ್ತಾರೆ. ಆದರೆ ದೃಢೀಕೃತ ದಾಖಲಿಗಳಲ್ಲದೆ ತೀರ್ಮಾನಿಸುವುದು ಎಂದು ಸಿಟಿ ರವಿ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದಿಸಿದರು.
ಇದು ರಾಜಕೀಯ ಪ್ರೇರಿತವಾಗಿ ದಾಖಲಿಸಿದಂತ ಪ್ರಕರಣವಾಗಿದ್ದು, ದಾಖಲೆ ಇಲ್ಲದೆ ಕಾರಣಕ್ಕೆ ಒಂದು ದಿನ ಜೈಲಿನಲ್ಲಿ ಇಡಬಾರದು ಒಂದು ದಿನ ಜೈಲುವಾಸಕ್ಕೂ ಸೂಕ್ತವಾದಂತಹ ಕಾರಣಗಳಿಲ್ಲ. ಹಾಗಾಗಿ ಸಿಟಿ ರವಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ವಕೀಲ ಅಶೋಕ ಹಾರನಹಳ್ಳಿ ಅವರು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡರು.
ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರ ವಕೀಲ ಶ್ಯಾಮ ಸುಂದರ ಅವರು ವಾದ ಆರಂಭಿಸಿ, ಶಾಸಕ ಮಹಿಳೆಯನ್ನು ಅವಾಚ್ಯ ಪದಗಳಿಂದ ಕರೆದು ನಿಂದಿಸಿದ್ದಾರೆ. 10 ಬಾರಿ ಪದೇಪದೇ ಹೀಗೆ ಕರೆದಿದ್ದಾರೆ. ಈ ವೇಳೆ ಅಶೋಕ ಹಾರನಹಳ್ಳಿ, ನೀವು ಏನೋ ಬೈದರಲ್ಲ ಎಂದು ಪ್ರತಿವಾದಿಸಿದರು.