ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೊಲೆ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಬಳಿಕ, ಜಾಮೀನು ಅರ್ಜಿಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಜಾಮೀನು ವಿಚಾರಣೆ ನಡೆಯುತ್ತಿದ್ದು, A2 ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಜೂನ್ 9ರಂದೇ ಪೊಲೀಸರಿಗೆ ಕೃತ್ಯದ ಸಂಪೂರ್ಣ ಮಾಹಿತಿ ಇತ್ತು. ಹಾಗಿದ್ದಾಗ ದರ್ಶನ್ ಹೇಳಿಕೆ ನೀಡುವವರೆಗೆ ಏಕೆ ಸುಮ್ಮನಿದ್ದರು? ಹೇಳಿಕೆ ನಂತರವೇ ಏಕೆ ವಸ್ತುಗಳನ್ನು ಸೀಜ್ ಮಾಡಿದರು. ವಾಚ್ ಮನ್ ರೂಮ್ನ ಎರಡು ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ. ಇದನ್ನು ಪಿಎಸ್ಐ ವಿನಯ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದ ಎಂದು ನಾಗೇಶ್ ವಾದದಲ್ಲಿ ಹೇಳಿದ್ದಾರೆ.
ಜೂನ್ 18ರಂದು ದರ್ಶನ ಮನೆಯಲ್ಲಿ 37.5 ಲಕ್ಷ ಪಡೆಯಲಾಗಿದೆ. ಸಾಕ್ಷಿಗಳಿಗೆ ಕೊಡಲೆಂದು ಈ ಹಣ ಇಟ್ಟಿದ್ದಾಗಿ ಹೇಳಿಕೆಗಳನ್ನು ಪಡೆದಿದ್ದಾರೆ. ಮೋಹನ ರಾಜ್ ಎಂಬವರು ಈ ಹಣವನ್ನು ದರ್ಶನ್ ಗೆ ನೀಡಿದ್ದರು. ಮೇ 2ರಂದೆ ದರ್ಶನಿಗೆ ನೀಡಬೇಕಿದ್ದ ಸಾಲವನ್ನು ವಾಪಸ್ ಮಾಡಿದ್ದರು.ಆಗ ರೇಣುಕಾ ಸ್ವಾಮಿ ಯಾರೆಂಬುವುದು ಜಗತ್ತಿಗೆ ಗೊತ್ತಿರಲಿಲ್ಲ ಎಂದು ವಾದಿಸಿದರು.
ಎ14 ಮೊಬೈಲ್ನಲ್ಲಿ ಮೃತನ ಫೋಟೋ ಇತ್ತೆಂದು ಹೇಳಲಾಗಿದೆ. ಆ ಫೋಟೋವನ್ನು ರಿಟ್ರೀವ್ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಪಿಎಸ್ಐ ವಿನಯ್ ಹೇಳಿಕೆಯಲ್ಲಿ ಅಂದು ತಾನು ಕೇರಳದಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೃತನ ಫೋಟೋವನ್ನು ಕಳುಹಿಸಿದ್ದೇ ಪಿಎಸ್ಐ ವಿನಯ್. ಆದರೆ ವಿನಯ್ ಮೊಬೈಲ್ನ ಸೀಜ್ ಮಾಡಿ ಫೋಟೋ ರಿಟ್ರೀವ್ ಮಾಡಿಲ್ಲ. ಹೀಗಿದ್ದಾಗ ಇದೊಂದು ಕ್ಲಾಸಿಕ್ ತನಿಖೆ ಎಂದು ಹೇಳಲು ಸಾಧ್ಯವೇ ಎಂದು ನಾಗೇಶ್ ಪ್ರಶ್ನೆ ಮಾಡಿದ್ದಾರೆ.
ರಸ್ತೆಬದಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಲಾಗಿತ್ತು. ಜೂ.9ರ ಬೆಳಿಗ್ಗ 10 ಗಂಟೆಗೆ ದೂರನ್ನು ರಿಜಿಸ್ಟರ್ ಮಾಡಲಾಗಿದೆ. ತಕ್ಷಣವೇ ದೇಹದ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ ಜೂ. 11ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೇಕೆ ಮಾಡಿದರು ಎಂಬುದೂ ಮಿಲಿಯನ್ ಡಾಲರ್ ಪ್ರಶ್ನೆ. ಪೋಸ್ಟ್ಮಾರ್ಟಂ ಕೂಡ ಜೂ. 11ರ ಮಧ್ಯಾಹ್ನ 2.45ಕ್ಕೆ ಮಾಡಲಾಗಿದೆ. ದೇಹದ ಐಡೆಂಟಿಟಿ ಆಗಿರಲಿಲ್ಲ ಎಂಬ ಸಬೂಬು ನೀಡಲಾಗಿದೆ. ಆದರೆ ಮಹಜರು ಮಾಡಲು ದೇಹದ ಐಡೆಂಟಿಟಿ ಏಕೆ ಬೇಕು ಎಂದು ನಾಗೇಶ್ ವಾದ ಮಂಡನೆ ಮಾಡಿದ್ದಾರೆ.
ದೇಹದಲ್ಲಿ ಗಾಯದ ಗುರುತುಗಳಿದ್ದಾಗ ವಿಳಂಬ ಮಾಡಿದ್ದೇಕೆ? ಇದ್ಯಾವುದಕ್ಕೂ ಅಧಿಕಾರಿ ವರದಿಯಲ್ಲಿ ಸೂಕ್ತ ಉತ್ತರವಿಲ್ಲ? 13 ಆರೋಪಿಗಳ ಶೂ, ಚಪ್ಪಲಿ ಬಟ್ಟೆಗಳಲ್ಲಿ ರಕ್ತದ ಕಲೆ ಇದೆ ಎಂದಿದ್ದಾರೆ. ಮೋಹನ್ ರಾಜ್ ಪುತ್ರಿಯ ಡ್ಯಾನ್ಸ್ ಆಲ್ಬಮ್ ಮಾಡಬೇಕಿತ್ತು, ದರ್ಶನ್ ಡಿ ಬೀಟ್ಸ್ ಗೆ ಹೇಳಿ ಇದನ್ನು ಮಾಡಿಸಿಕೊಟ್ಟಿದ್ದಾರೆ. ಅದನ್ನು ಮೇ 2 ರಂದು ಹಿಂದಿರುಗಿಸುದಾಗಿ ಮೋಹನ್ ರಾಜ್ ಹೇಳಿಕೆ ಕೊಟ್ಟಿದ್ದಾರೆ. ಹೀಗಿದ್ದಾಗ ರೇಣುಕಾಸ್ವಾಮಿ ದೇಹ ನೋಡಿ ಹಣ ಸಂಗ್ರಹಿಸಿದ್ದಾರೆ ಎಂದು ದರ್ಶನ್ ಹಣ ಸಂಗ್ರಹಿಸಿದ್ದಾರೆಂದು ಹೇಳುವುದು ಹೇಗೆ? ರೇಣುಕಾ ಸ್ವಾಮಿ ಕೊಲ್ಲುವ ಕಲ್ಪನೆಯಿಂದ ಹಣ ಪಡೆಯಲು ಸಾಧ್ಯವೇ?ಎಂದು ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು.
ಒಬ್ಬ ಬರ್ತಾನೆ ರೇಣುಕಾ ಸ್ವಾಮಿ ಬರ್ತಾನೆ, ಅವನನ್ನು ನಾನು ಮರ್ಡರ್ ಮಾಡಬೇಕಾಗುತ್ತದೆ. ನನ್ನ ಮೇಲೆ ಚಾರ್ಜ್ ಶೀಟ್ ಹಾಕ್ತಾರೆ ಆಗ ಸಾಕ್ಷಿಗಳಿಗೆ ಕೊಡಬೇಕು ಅಂತ ಹಣ ಇಟ್ಟುಕೊಂಡಿದ್ದೆ ಹೀಗೆ ಅಂತ ಕಥೆ ಹೇಳಲು ಸಾಧ್ಯವಿದೆಯಾ?ಜೂನ್ 18 ಮತ್ತು 19ರಂದು ಎರಡೆರಡು ಸ್ವಚ್ಛ ಹೇಳಿಕೆ ದಾಖಲಿಸಲಾಗಿದೆ. ಈ ಹೇಳಿಕೆಗಳು ಒಂದಕ್ಕೊಂದು ವ್ಯತಿರಿಕ್ತವಾಗಿವೆ ಎಂದು ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ವಾದಿಸಿದರು.
ಕಾಲ್ ಡೀಟೈಲ್ಸ್ ಆಧಾರದ ಮೇಲೆ ಒಳಸಂಚು ಎಂದು ಬಿಂಬಿಸಲಾಗುತ್ತಿದೆ. A1 ಸ್ನೇಹಿತೆ ಎಂದು ಅಭಿ ಯೋಜನೆಯಲ್ಲಿ ಹೇಳಲಾಗಿದೆ.A3 ಕೆಲಸದಲ್ಲಿದ್ದಾನೆ ಮ್ಯಾನೇಜರ್ ಡ್ರೈವರ್ ಕೂಡ ಆರೋಪಿ ಮಾಡಿದ್ದಾರೆ.ಕೃತ್ಯದ ಸಂದರ್ಭದಲ್ಲಿ ಮಾತ್ರವಲ್ಲ ಹಲವು ವರ್ಷಗಳಿಂದ ಕರೆ ಮಾಡುತ್ತಿದ್ದಾರೆ. ಜನೆವರಿ 1 ರಿಂದ 2024 ರಿಂದ ಜೂನ್ 9 2024 ರ ವರೆಗೂ 342 ಬಾರಿ ದರ್ಶನ್ ಪವಿತ್ರಗೌಡಗೆ ಕರೆ ಮಾಡಿದ್ದಾರೆ.
ಅಲ್ಲದೆ A3 ಪವನ್ ಗೆ ದರ್ಶನ್ 416 ಬಾರಿ ಕರೆ ಮಾಡಿದ್ದಾರೆ. ಪ್ರರಸೀಕ್ಯೂಷನ್ ಕೇಸಿನ ಪ್ರಕಾರವೇ ಇಷ್ಟು ಬಾರಿ ಕರೆ ಮಾಡಲಾಗಿದೆ. ಸ್ನೇಹಿತೆ ಕೆಲಸದವರಿಗೆ ಕರೆ ಮಾಡಿದರೆ ತಪ್ಪೇ? ಜೂನ್ 7, 8, 9 ರಂದು ಮಾತ್ರವೇ ಕರೆ ಮಾಡಿದ್ದರೆ ಸಂಶಯ ಪಡಬಹುದಾಗಿತ್ತು. ಆದರೆ ಕೃತ್ಯಕ್ಕೂ ಮೊದಲು ನೂರಾರು ಬಾರಿ ಕರೆ ಮಾಡಲಾಗಿದೆ. ಹಾಗಾಗಿ ಈ ಕಾಲ್ ರೆಕಾರ್ಡ್ಸ್ ಗೆ ಯಾವುದೇ ಮೌಲ್ಯ ಕೊಡಬಾರದು ಎಂದು ದರ್ಶನ್ ಪರವಕೀಲ ಸಿ ವಿ ನಾಗೇಶ್ ವಾದಿಸಿದರು.