ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ರೈಲು ಹರಿದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೆಳಗಿನನಾಯಕರಂಡಹಳ್ಳಿಯಲ್ಲಿ ರೈಲಿಗೆ ಸಿಲುಕಿ ದಂಪತಿ ಸಾವನ್ನಪ್ಪಿದ್ದಾರೆ. ಹಳಿ ಮೇಲೆ ಕುರಿ ಮೇಯಿಸುತ್ತಿದ್ದ ವೇಳೆ ಏಕಾಏಕಿ ರೈಲು ಬಂದ ಹಿನ್ನೆಲೆಯಲ್ಲಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರೈಲ್ವೆ ಹಳಿ ಮೇಲೆ ಮೇಕೆ ಮೇಯಿಸುತ್ತಿದ್ದ ಚಂದ್ರನಾಯಕ್ ಹಾಗೂ ಜಯಬಾಯಿ ಎಂಬ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಂದ್ರನಾಯಕ್ ಹಳಿ ಮೇಲೆ ಕುರಿತು ಮೇಯಿಸುತ್ತಿದ್ದ ವೇಳೆ ರೈಲು ಬಂದಿದೆ. ರೈಲು ಬರುತ್ತಿದ್ದನ್ನು ಕಂಡು ಪತ್ನಿ ರಕ್ಷಣೆಗೆ ಧಾವಿಸಿದ್ದ ಜಯಬಾಯಿ ಕೂಡ ಸಾವನ್ನಪ್ಪಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.