ಕಲಬುರ್ಗಿ : ಕಲ್ಬುರ್ಗಿಯಲ್ಲಿ ಭೀಕರವಾದಂತಹ ಅಪಘಾತ ನಡೆದಿದ್ದು ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಕಲಬುರ್ಗಿ ನಗರದ ಹೊರವಲಯದ ಬೀದರ್ ರಸ್ತೆಯ ಸ್ವಾಮಿ ಸಮರ್ಥ ದೇವಸ್ಥಾನದ ಬಳಿ ನಡೆದಿದೆ.
ನಿನ್ನೆ ಈ ಒಂದು ಅಪಘಾತ ನಡೆದಿದ್ದು, ಮೃತರನ್ನು ಮಹಮದ್ ಶೇಕಿಬ್ ಜಿಲ್ಹಾನಿ (32), ಶೇರಿನ್ ಶೆಕಿಬ್ (28) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.ಕಾರು ಹುಮನಾಬಾದ್ ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿತ್ತು, ಕಲಬುರಗಿಯಿಂದ ಹುಮನಾದ್ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಕುರಿತಂತೆ ಸಂಚಾರಿ ಪೊಲೀಸ್ ಠಾಣೆ ಎರಡರಲ್ಲಿ ಪ್ರಕರಣ ದಾಖಲಾಗಿದೆ.