ರಾಯಚೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಿರಂತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು ಇದೀಗ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಎಂಬಲ್ಲಿ ದಂಪತಿಗಳು ಸಾವನ್ನಪ್ಪಿದ್ದಾರೆ. ತಂದೆ ತಾಯಿ ಕಳೆದುಕೊಂಡ ಪುತ್ರ ರೂಲ್ಸ್ ಮಾಡಿ ನ್ಯಾಯಕ್ಕಾಗಿ ಆಳಲು ತೋಡಿಕೊಂಡಿರುವ ಘಟನೆ ವರದಿಯಾಗಿದೆ.
ಹೌದು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಂದೆ ತಾಯಿ ಬಲಿಯಾಗಿದ್ದು, ತಂದೆ ತಾಯಿಯನ್ನ ಕಳೆದುಕೊಂಡು ಯುವಕ ಬಸವರಾಜ್ ಸದ್ಯ ಅನಾಥನಾಗಿದ್ದಾನೆ. ರಾಯಚೂರಿನಲ್ಲಿ ನಡೆದ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಹಟ್ಟಿ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಸವರಾಜ್ ತಾಯಿ ಈರಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೂ ಅದೇ ನೋವಲ್ಲಿ ತಂದೆ ಪರಪ್ಪ ಕೂಡ ಸಾವನ್ನಪ್ಪಿದ್ದಾರೆ. ಈ ಕುರಿತು ಯುವಕ ಬಸವರಾಜ್ ರಿಲ್ಸ್ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಬಸವರಾಜ ನಮ್ಮ ಮನೆ ಹರಾಜಿನಲ್ಲಿ ಇದೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾನೆ ವಿಡಿಯೋ ರೀಟ್ಸಪ್ ಮಾಡಿ ಯುವಕ ನ್ಯಾಯಕ್ಕಾಗಿ ಆಗ್ರಹಿಸಿದ್ದಾನೆ.
ಮೃತ ಈರಮ್ಮ ಅವರು ವಿವಿಧ ಫೈನಾನ್ಸಿಗಳಲ್ಲಿ ಸುಮಾರು ಐದರಿಂದ ಆರು ಲಕ್ಷದವರೆಗೆ ಸಾಲ ಪಡೆದುಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಬಡ್ಡಿ ಕಟ್ಟುತ್ತಿದ್ದರು. ಆದರೆ ಕೆಲವು ತಿಂಗಳಿನಿಂದ ಬಡ್ಡಿ ಕಟ್ಟದ ಹಿನ್ನೆಲೆಯಲ್ಲಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದು ಮರೆಮ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಸಾವಿನ ನೋವಲ್ಲಿ ಬಸವರಾಜ ತಂದೆ ಪರಪ್ಪ ಕೂಡ ಸಾವನ್ನಪ್ಪಿದ್ದಾರೆ. ಹಾಗಾಗಿ ಇದೀಗ ಅನಾಥವಾಗಿರುವ ಬಸವರಾಜ್ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.