ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ದಂಪತಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸೀಮೆಎಣ್ಣೆ ಸುರಿದುಕೊಂಡು ದಂಪತಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಇಬ್ಬರಿಂದ ಸೀಮೆಎಣ್ಣೆಯನ್ನು ಕಿತ್ತುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಜೆ.ಜೆ ನಗರದ ನಿವಾಸಿಗಳಾದ ಶಾಯಿಸ್ತಾ ದಂಪತಿಗಳು ಅಂತ ತಿಳಿದು ಬಂದಿದೆ. ಬ್ಯಾಂಕ್‌ನಿಂಧ ಸಾಲ ಪಡೆದುಕೊಂಡಿದ್ದರು, ಸಾಲವನ್ನು ತೀರಿಸಿದ ಹಿನ್ನಲೆಯಲ್ಲಿ, ಬ್ಯಾಂಕ್‌ನವರು ಜಮೀನನ್ನು ಹರಾಜು ಮಾಡಲು ಮುಂದಾಗಿದ್ದರು ಎನ್ನಲಾಗಿದೆ.