ಹಾವೇರಿ : ರಾಜ್ಯದಲ್ಲಿ ಕೊರೋನ ರೂಪಾಂತರಿಯ ಹೊಸ ತಳಿ ಸೋಂಕು ಹರಡುತ್ತಿದ್ದು, ಇದುವರೆಗೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೋನ ಪ್ರಕರಣಗಳು ಪತ್ತೆಯಾಗಿವೆ. ಇದೀಗ ಹಾವೇರಿ ಜಿಲ್ಲೆಯಲ್ಲೂ ಕೂಡ ನಾಲ್ಕು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಗರ್ಭಿಣಿ ಸೇರಿದಂತೆ ನಾಲ್ವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಹಾವೇರಿ ಜಿಲ್ಲೆಯ ಹಿರೇಕೇರೂರು, ಹಾನಗಲ್ ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಒಟ್ಟು ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಹೌದು ಹಾವೇರಿಯಲ್ಲಿ ನಾಲ್ವರಿಗೆ ಕೊರೊನ ಸೋಂಕು ದೃಢಪಟ್ಟಿದ್ದು, ಗರ್ಭಿಣಿ ಸೇರಿದಂತೆ ಮೂವರು ಪುರುಷರಿಗೆ ಇದೀಗ ಕರೋನ ಸೋಂಕು ದೃಢಪಟ್ಟಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಇಬ್ಬರಿಗೆ ಕರೋನಾ ಪ್ರಕರಣಗಳು ಪತ್ತೆಯಾದರೆ, ಇನ್ನು ಹಾನಗಲ್ ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಒಂದೊಂದು ಕೇಸ್ ಪತ್ತೆಯಾಗಿದೆ.
ನಾಲ್ವರ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಓರ್ವ ವೃದ್ಧನಿಗೆ ಸದ್ಯ ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸೋಂಕು ತಗಲಿರುವ ಗರ್ಭಿಣಿಗೆ ಮನೆಯಲ್ಲಿಯೇ ಹೋಂ ಐಸೋಲೇಶನ್ ಮಾಡಲಾಗಿದೆ ಎಂದು ಹಾವೇರಿಯ ಜಿಲ್ಲಾ ಆರೋಗ್ಯ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.