ಬೆಂಗಳೂರು : ಇದೀಗ ರಾಜ್ಯಕ್ಕೆ ಕೋರೊನಾ ಹೊಸ ತಳಿ ಎಂಟ್ರಿ ಕೊಟ್ಟಿದ್ದು, ಬೆಂಗಳೂರಿನಲ್ಲಿ ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ 71 ಕ್ಕೆ ಏರಿಕೆಯಾಗಿದೆ. ಅದರಲ್ಲೂ ಬೆಂಗಳೂರಿನ ಮಹದೇವಪುರ ವಲಯ ಕೊರೋನಾದ ಹಾಟ್ ಸ್ಪಾಟ್ ಎಂದು ಹೇಳಲಾಗಿದ್ದು ಏಕೆಂದರೆ ಅಲ್ಲಿಯೇ ಅತಿ ಹೆಚ್ಚು ಕೇಸ್ ಗಳು ಪಾಸಿಟಿವ್ ವರದಿ ಬಂದಿವೆ.
ಬೆಂಗಳೂರಿನಲ್ಲಿ 71ಕ್ಕೆ ಏರಿಕೆಯಾದ ಕೊರೊನ ಸೋಂಕಿತರ ಸಂಖ್ಯೆ ಮಹಾದೇವಪುರ ವಲಯ ಕೊರೋನ ಹಾಟ್ ಸ್ಪಾಟ್ ಆಗಿದ್ದು ಮಹದೇವಪುರ ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಬೆಂಗಳೂರಿನಲ್ಲಿ ಕರೋನ ಆರ್ಭಟ ಮುಂದುವರೆದಿದೆ.
ಯಾವ್ಯಾವ ವಲಯದಲ್ಲಿ ಎಷ್ಟು ಕೇಸ್?
ಬೊಮ್ಮನಹಳ್ಳಿಯಲ್ಲಿ 7, ಬೆಂಗಳೂರು ಕೇಂದ್ರ 5, ಯಲಹಂಕ 4, ದಾಸರಹಳ್ಳಿಯಲ್ಲಿ 1 ಆರ್ ಆರ್ ನಗರ 1, ಮಾದೇವಪುರದಲ್ಲಿ 16, ಬೆಂಗಳೂರು ದಕ್ಷಿಣ 14, ಬೆಂಗಳೂರು ಪೂರ್ವ 13, ಬೆಂಗಳೂರು ಪಶ್ಚಿಮ 10 ಪ್ರಕರಣಗಳು ಬೆಳಗೆಗೆ ಬಂದಿವೆ.