ಉತ್ತರಕನ್ನಡ : ಅಡುಗೆ ಸಿಲಿಂಡರ್ ಸ್ಪೋಟಗೊಂಡು ನೌಕಾನೆಲೆ ಕಾರ್ಮಿಕರ ಮನೆಗಳಿಗೆ ಬೆಂಕಿ ತಗುಲಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ.
Miss World 2024:’ನೀತಾ ಅಂಬಾನಿಗೆ’ ‘ಮಾನವೀಯ ಪ್ರಶಸ್ತಿ’ ನೀಡಿ ಗೌರವ | ‘Humanitarian Award’
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮುದುಗಾ ಎಂಬಲ್ಲಿ ನೌಕಾನೆಲೆಯ ಕಾರ್ಮಿಕರ ಕಾಲೋನಿಯಲ್ಲಿ ಸುಮಾರು 150ಕ್ಕೂ ಅಧಿಕ ಶೆಡ್ ಗಳು ಇವೆ.ಈ ವೇಳೆ ಸಿಲಿಂಡರ್ ಸ್ಫೋಟದಿಂದ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿವೆ.ಆದರೆ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಈ ವೇಳೆ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿವೆ ಎಂದು ತಿಳಿದುಬಂದಿದೆ.
ಪತಿಯ ನಿಧನದ ನಂತರ ‘ಅತ್ತೆ-ಮಾವನಿಂದ’ ಸೊಸೆಗೆ ‘ಜೀವನಾಂಶವಿಲ್ಲ’ : ಹೈಕೋರ್ಟ್ ತೀರ್ಪು
51 ಕೆಜಿ ಗಾಂಜಾ ವಶ
ಕೇರಳದಿಂದ ಸಾಗಿಸುತ್ತಿದ್ದ 51 ಕೆಜಿ ಗಾಂಜಾವನ್ನು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಸ್ಕೆಬೈಲು ಸಮೀಪ ವಶಕ್ಕೆ ಪಡೆಯಲಾಗಿದೆ. ಕಸ್ಕೆಬೈಲು ಚೆಕ್ಪೋಸ್ಟ್ ಬಳಿ ಸಮೀಪ ಪೊಲೀಸರು ಗಾಂಜಾ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ್ದಾರೆ.
ಯುವ ಸಮೂಹ ‘ಡ್ರಗ್ಸ್’ ವ್ಯಸನಿಗಳಾಗುತ್ತಿರುವುದು ದುರಾದೃಷ್ಟಕರ : ಸಿಎಂ ಸಿದ್ದರಾಮಯ್ಯ ಕಳವಳ
ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಸ್ಕೆ ಬೈಲು ಎಂಬಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ ಕೇರಳ ಮೂಲದ ಮುನೀರ್ ಅನ್ನು ಇದೆ ವೇಳೆ ಬಂಧಿಸಿದ್ದಾರೆ ಗೋಣಿಬೀಡು ಪೊಲೀಸರು 51 ಕೆಜಿ ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದಾರೆ ಘಟನೆ ಕುರಿತಂತೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.